‘ಗಿಚ್ಚಿ ಗಿಲಿಗಿಲಿ’ ಫಿನಾಲೆಯಲ್ಲಿ ರಿವೀಲ್ ಆಗ್ತಿದೆ Bigg Boss ಬಿಗ್ ಅಪ್‌ಡೇಟ್- ಏನದು?

Public TV
1 Min Read
bigg boss kannada

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ‘ಗಿಚ್ಚಿ ಗಿಲಿಗಿಲಿ ಸೀಸನ್ 3’ ಫಿನಾಲೆಯಲ್ಲಿ ಇಂದು ದೊಡ್ಮನೆ ಆಟದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು (Big Update) ರಿವೀಲ್ ಆಗಲಿದೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಗಲಿದೆ. ಇದನ್ನೂ ಓದಿ:ಬಾಲಿವುಡ್ ಆಫರ್ ಬಾಚಿಕೊಂಡ ‘ಸೀತಾ ರಾಮಂ’ ನಟಿ

FotoJet 21‘ಬಿಗ್ ಬಾಸ್’ನ ಕುರಿತಾದ ಪ್ರೋಮೋವೊಂದು ಇದೀಗ ರಿವೀಲ್ ಆಗಿದೆ. ಇಂದು (ಸೆ.15) ಸಂಜೆ 6 ಗಂಟೆಗೆ ಗಿಚ್ಚಿ ಗಿಲಿಗಿಲಿ-3ರ ಫಿನಾಲೆಯಲ್ಲಿ ಬಿಗ್ ಬಾಸ್‌ಗೆ ನಿರೂಪಕ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇದನ್ನೇ ಪ್ರೋಮೋದಲ್ಲಿ ಮುಂದಿನ ‘ಬಿಗ್ ಬಾಸ್’ ಹೋಸ್ಟ್ ಕುರಿತು ತಿಳಿಸುವುದಾಗಿ ಸುಳಿವು ನೀಡಿದೆ ವಾಹಿನಿ.

Bigg Boss 1 4 ಕಳೆದ 10 ವರ್ಷಗಳಿಂದ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಅವರು ಇರುವುದು ಡೌಂಟ್‌ ಎಂಬ ಸುದ್ದಿ ವೈರಲ್‌ ಆಗಿತ್ತು. ಸುದೀಪ್‌ ಅವರು ಈ ಬಾರಿ ಶೋ ನಡೆಸುತ್ತಾರೋ? ಇಲ್ವೋ? ಎಂಬುದರ ಬಗ್ಗೆ ಫ್ಯಾನ್ಸ್‌ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಸುದೀಪ್ ಆಗಲಿ, ವಾಹಿನಿ ಆಗಲಿ ಈ ಕುರಿತು ಕ್ಲ್ಯಾರಿಟಿ ನೀಡಿರಲಿಲ್ಲ. ಅದಕ್ಕೆಲ್ಲಾ ಇಂದು ಸ್ಪಷ್ಟನೆ ಸಿಗಲಿದೆ.

ಮೂಲಗಳ ಪ್ರಕಾರ, ಈಗಾಗಲೇ ಹೈದರಾಬಾದ್‌ನಲ್ಲಿ ಸುದೀಪ್‌ ಅವರ ಪ್ರೋಮೋ ಶೂಟ್‌ ಆಗಿದೆ ಎನ್ನಲಾಗಿದೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಈ ಶೋ ಪ್ರಸಾರಕ್ಕೆ ಪ್ಲ್ಯಾನ್‌ ಮಾಡಿದ್ದಾರಂತೆ. ಈ ಕುರಿತು ವಾಹಿನಿಯ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.

Share This Article