‘ದೇವರ’ ಚಿತ್ರದ ಪೋಸ್ಟರ್ ಔಟ್- ಎರಡು ವಿಭಿನ್ನ ಲುಕ್‌ನಲ್ಲಿ ಜ್ಯೂ.ಎನ್‌ಟಿಆರ್

Public TV
1 Min Read
jr.ntr

ತೆಲುಗು ನಟ ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ‘ದೇವರ’ (Devara Film) ಸಿನಿಮಾದ ಹೊಸ ಪೋಸ್ಟರ್ ರಿವೀಲ್ ಆಗಿದೆ. ರಗಡ್ ಲುಕ್‌ನಲ್ಲಿ ಎರಡು ಡಿಫರೆಂಟ್ ಗೆಟಪ್‌ನಲ್ಲಿ ತಾರಕ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ

janhvi kapoor 1

‘ದಿ ಫೇಸಸ್ ಆಫ್ ಫಿಯರ್’ ಎಂದು ‘ದೇವರ’ ಸಿನಿಮಾದ ಪೋಸ್ಟರ್‌ನಲ್ಲಿ ಬರೆಯಲಾಗಿದ್ದು, ಜ್ಯೂ.ಎನ್‌ಟಿಆರ್ ಅವರ ಎರಡು ರೀತಿಯ ವಿಭಿನ್ನ ಲುಕ್ ನೋಡುಗರನ್ನು ಸೆಳೆಯುತ್ತಿದೆ. ಈ ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಅವರು ಕಾಣಿಸಿಕೊಳ್ತಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲೂ ಸುಳಿವು ಬಿಟ್ಟು ಕೊಟ್ಟಿಲ್ಲ.

 

View this post on Instagram

 

A post shared by NTR Arts (@ntrartsoffl)

ಇನ್ನೂ ಇತ್ತೀಚೆಗೆ ‌’ದೇವರ’ ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಲಾಗಿದೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ ಹುಡುಗನ ಹುರುಪು’ ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದರು. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಚಿತ್ರದ ಪೋಸ್ಟರ್ ಬಿಟ್ಟಿರೋದು ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಜೊತೆ ಜಾನ್ವಿ ಕಪೂರ್ (Janhvi Kapoor), ಸೈಫ್ ಅಲಿ ಖಾನ್, ಚೈತ್ರಾ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಸೆ.27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

Share This Article