‘ಕಲ್ಕಿ 2898 ಎಡಿ’ ಸೀಕ್ವೆಲ್‌ನಲ್ಲಿ ನಟಿಸ್ತಾರಾ ನಾನಿ?- ಸ್ಪಷ್ಟನೆ ನೀಡಿದ ನಟ

Public TV
1 Min Read
nani 1

ತೆಲುಗು ನಟ ನಾನಿ (Actor Nani) ಸದ್ಯ ‘ಸೂರ್ಯನ ಸಾಟರ್ಡೆ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕಲ್ಕಿ ಸೀಕ್ವೆಲ್‌ನಲ್ಲಿ ನಾನಿ ನಟಿಸುತ್ತಾರೆ ಎಂದು ಹಬ್ಬಿದ ಸುದ್ದಿಗೆ ನಾನಿ ಕ್ಲ್ಯಾರಿಟಿ ನೀಡಿದ್ದಾರೆ. ‘ಕಲ್ಕಿ 2’ನಲ್ಲಿ ನಾನು ನಟಿಸುತ್ತಿಲ್ಲ ಎಂದು ನಾನಿ ಮಾತನಾಡಿದ್ದಾರೆ.

Nani 2

ಸಂದರ್ಶನವೊಂದರಲ್ಲಿ ನಾನಿ ಮಾತನಾಡಿ, ನಾನು ‘ಕಲ್ಕಿ 2’ ಸಿನಿಮಾದಲ್ಲಿ ನಟಿಸುತ್ತಿಲ್ಲ. ಚಿತ್ರತಂಡ ನನಗೆ ಅಪ್ರೋಚ್ ಕೂಡ ಮಾಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ಇದೆಲ್ಲಾ ಹೇಗೆ ವೈರಲ್ ಆಯ್ತು ಎಂಬುದು ನನಗೆ ತಿಳಿಯುತ್ತಿಲ್ಲ. ನಿಜಕ್ಕೂ ಈ ಸುದ್ದಿ ಕೇಳಿ ನಾನು ಶಾಕ್‌ ಆದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:‘ಭೀಮ’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾ ಘೋಷಿಸಿದ ದುನಿಯಾ ವಿಜಯ್

Kalki 3

ಅಂದಹಾಗೆ, ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಯಶಸ್ಸು ಕಂಡಿದೆ. ‘ಕಲ್ಕಿ 2’ ಬರೋದಾಗಿ ಚಿತ್ರತಂಡ ಸುಳಿವು ನೀಡಿದೆ. ಕೆಲದಿನಗಳಿಂದ ‘ಕಲ್ಕಿ 2’ನಲ್ಲಿ ನಾನಿ ಕ್ಯಾಮಿಯೋ ರೋಲ್ ಮಾಡುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಇನ್ನೂ ಆ.29ಕ್ಕೆ ಸೂರ್ಯನ ಸಾಟರ್ಡೆ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಾನಿಗೆ ಹೀರೋಯಿನ್ ಆಗಿ ಕನ್ನಡತಿ ಪ್ರಿಯಾಂಕಾ ಮೋಹನ್ (Priyanka Mohan) ನಟಿಸಿದ್ದಾರೆ.

Share This Article