ವಿಜಯ್‌ ದೇವರಕೊಂಡ ಅಲ್ಲ, ರಾಮ್‌ ಪೋತಿನೇನಿಗೆ ರುಕ್ಮಿಣಿ ವಸಂತ್‌ ನಾಯಕಿ

Public TV
1 Min Read
rukmini vasanth 1

ನ್ನಡದ ಬ್ಯೂಟಿ ರುಕ್ಮಿಣಿ ವಸಂತ್‌ಗೆ (Rukmini Vasanth) ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ತಮಿಳಿನ ಬಿಗ್ ಸ್ಟಾರ್‌ಗಳ ನಟಿಸಿದ ಮೇಲೆ ತೆಲುಗಿನಲ್ಲಿ ರುಕ್ಮಿಣಿಗೆ ಅದೃಷ್ಟ ಒಲಿದು ಬಂದಿದೆ. ವಿಜಯ್ ದೇವರಕೊಂಡ (Vijay Devarakonda) ಅಲ್ಲ, ರಾಮ್ ಪೋತಿನೇನಿಗೆ ಕನ್ನಡದ ನಟಿ ಜೋಡಿಯಾಗ್ತಿದ್ದಾರೆ. ಇದನ್ನೂ ಓದಿ:ಒಂದೇ ಚಿತ್ರದಲ್ಲಿ ರಣ್‌ಬೀರ್, ಆಲಿಯಾ ಭಟ್, ವಿಕ್ಕಿ ಕೌಶಲ್- ಬನ್ಸಾಲಿ ಆ್ಯಕ್ಷನ್ ಕಟ್

rukmini vasanth 1

ವಿಜಯ್ ಸೇತುಪತಿ, ಶಿವ ಕಾರ್ತಿಕೇಯನ್‌ಗೆ ಹೀರೋಯಿನ್ ಆಗಿ ನಟಿಸಿದ ನಂತರ ತೆಲುಗಿನಿಂದ ನಟಿಗೆ ಬುಲಾವ್ ಬಂದಿದೆ. ವಿಜಯ್ ದೇವರಕೊಂಡಗೆ ಅಲ್ಲ, ಬದಲಾಗಿ ರಾಮ್ ಪೋತಿನೇನಿ (Ram Pothineni) ಮುಂಬರುವ ಚಿತ್ರಕ್ಕೆ ರುಕ್ಮಿಣಿ ವಸಂತ್ ಸಹಿ ಹಾಕಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Ram Pothineni 2

ತೆಲುಗಿನಿಂದ ಸಾಕಷ್ಟು ಸಿನಿಮಾತಂಡದಿಂದ ನಟಿಗೆ ಆಫರ್ ಸಿಕ್ಕಿದೆ. ಆದರೆ ಕಥೆ ಮತ್ತು ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಟಿ ಈಗ ರಾಮ್ ನಟಿಸಲಿರುವ ಚಿತ್ರ ಕಥೆ ಇಷ್ಟವಾಗಿ ಓಕೆ ಎಂದಿದ್ದಾರೆ ಎಂಬುದು ಇನ್‌ಸೈಡ್ ನ್ಯೂಸ್. ಚಿತ್ರತಂಡ ಕಡೆಯಿಂದ ಅಫಿಷಿಯಲ್ ಅನೌನ್ಸ್‌ಮೆಂಟ್ ಬರುವವರೆಗೂ ಕಾಯಬೇಕಿದೆ. ‌ ಅಲ್ಲಿಗೆ ಕೆಲ ತಿಂಗಳುಗಳಿಂದ ವಿಜಯ್‌ ದೇವರಕೊಂಡಗೆ ರುಕ್ಮಿಣಿ ನಾಯಕಿ ಎಂದು ಹರಿದಾಡುತ್ತಿದ್ದ ಸುದ್ದಿಗೆ ಈಗ ಸ್ಪಷ್ಟನೆ ಸಿಕ್ಕಿದೆ.

ಅಂದಹಾಗೆ, ಕನ್ನಡದಲ್ಲಿ ಶಿವಣ್ಣ ಜೊತೆ ಭೈರತಿ ರಣಗಲ್, ಶ್ರೀಮುರಳಿ ಜೊತೆ ಬಘೀರ ಸೇರಿದಂತೆ ಹಲವು ಚಿತ್ರಗಳನ್ನು ರುಕ್ಮಿಣಿ ವಸಂತ್ ಒಪ್ಪಿಕೊಂಡಿದ್ದಾರೆ.

Share This Article