ದರ್ಶನ್ ಜೊತೆ ಕುಳಿತ ನಟೋರಿಯಸ್ ರೌಡಿಶೀಟರ್‌ಗಳು ಯಾರು?

Public TV
1 Min Read
darshan wilson garden naga

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಸಿಲುಕಿರುವ ನಟ ದರ್ಶನ್ (Darshan) ಕಳೆದ ಎರಡೂವರೆ ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನೇನು ಈ ಪ್ರಕರಣ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಪೊಲೀಸರು ತಯಾರಿ ನಡೆಸುತ್ತಿರುವ ಹೊತ್ತಿನಲ್ಲಿ ನಟ ದರ್ಶನ್‌ ರೌಡಿಶೀಟರ್‌ಗಳ ಜೊತೆ ಕುಳಿತಿರುವ ಫೋಟೋವೊಂದು ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಜೈಲಲ್ಲಿ ನಟ ದರ್ಶನ್ ಐಶಾರಾಮಿ ಜೀವನ ನಡೆಸ್ತಿದ್ದಾರಾ? ರಾಜಾತಿಥ್ಯ ಪಡೆಯುತ್ತಿದ್ದಾರಾ? ಎಂಬ ಅನುಮಾನಗಳಿಗೆ ಕಾರಣವಾಗಿದೆ. ನಟ ದರ್ಶನ್ ಜೈಲಿನ ಆವರಣದ ಹುಲ್ಲು ಹಾಸಿನ ಮೇಲೆ ಚೇರಲ್ಲಿ ಮೂವರ ಜೊತೆ ಕುಳಿತು, ಒಂದು ಕೈಯಲ್ಲಿ ಸಿಗರೇಟ್ ಹಿಡಿದು ಮತ್ತೊಂದು ಕೈಯಲ್ಲಿ ಏನನ್ನೋ ಕುಡಿಯಲು ಮಗ್ ಹಿಡಿದ ಫೋಟೋ ಜೈಲಿನಿಂದಲೇ  ಬಹಿರಂಗವಾಗಿದೆ.

kulla sena darshan

ನಟೋರಿಯಸ್ ರೌಡಿಶೀಟರ್‌ಗಳಾದ ವಿಲ್ಸನ್‌ ಗಾರ್ಡನ್ ನಾಗ (Wilson Garden Naga), ಕುಳ್ಳ ಸೀನಾ (Kulla Seena) ಹಾಗೂ ತನ್ನ ಮ್ಯಾನೇಜರ್ ನಾಗರಾಜ್ (Nagaraj) ಜೊತೆ ನಟ ದರ್ಶನ್ ಕುಳಿತಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗಿದ್ದು, ಜೈಲು ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ.  ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ – ಇಬ್ಬರು ಐಜಿಪಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ

ವಿಲ್ಸನ್ ಗಾರ್ಡನ್ ನಾಗ ಯಾರು?
ಬೆಂಗಳೂರಿನ ಭೂಗತ ಲೋಕದಲ್ಲಿ ಸುದ್ದಿ ಮಾಡಿರುವ ಈತ ಸಿದ್ದಾಪುರ ಮಹೇಶನ ಮರ್ಡರ್ ಕೇಸಲ್ಲಿ ಜೈಲು ಸೇರಿದ್ದಾನೆ. ಕೋರ್ಟ್ ಮುಂದೆ ಶರಣಾಗಿ ಜೈಲು ಸೇರಿದ್ದ ಈತನ ಮೇಲೆ ಪೊಲೀಸರು ಕೋಕಾ ಕಾಯ್ದೆ ಹಾಕಿದ್ದಾರೆ.

ಈ ಕುಳ್ಳ ಸೀನ ಯಾರು?
ದೊಡ್ಡಕಲ್ಲಸಂದ್ರದ ಕುಳ್ಳ ಸೀನ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ರೌಡಿಶೀಟರ್ ಆಗಿದ್ದಾನೆ. ಕಾರ್ಪೊರೇಟರ್ ಕೊಲೆ ಪ್ರಕರಣದಲ್ಲಿ ಸಜಾ ಕೈದಿಯಾಗಿರುವ ಈತನ ಮೇಲೆ ಕೋಣನಕುಂಟೆ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

 

Share This Article