ವಿಮೆ ಹಣ ದೋಚಲು ಅಮಾಯಕ ವ್ಯಕ್ತಿಯ ಮರ್ಡರ್ ಮಿಸ್ಟ್ರಿ- ಹಾಸನದಲ್ಲಿ ನಟೋರಿಯಸ್ ದಂಪತಿ ಅರೆಸ್ಟ್

Public TV
4 Min Read
Hassan murder

ಹಾಸನ: ಇನ್ಸೂರೆನ್ಸ್ ಹಣ ದೋಚಲು ದಂಪತಿ ಖತರ್ನಾಕ್ ಸ್ಕೆಚ್ ಹಾಕಿ ಮರ್ಡರ್ ಮಾಡಿರುವ ಘಟನೆ ಹಾಸನ (Hassan) ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ.

ಮುನಿಶ್ವಾಮಿಗೌಡ ಹಾಗೂ ಶಿಲ್ಪರಾಣಿ ವಶಕ್ಕೆ ಪಡೆದ ದಂಪತಿ. ನಟೋರಿಯಸ್ ದಂಪತಿ ಅಮಾಯಕನನ್ನು ಕೊಂದು ಹಣ ಹೊಡೆಯಲು ಸ್ಕೆಚ್ ಹಾಕಿದ್ದರು. ಪತಿ ಅಪಘಾತದಲ್ಲಿ ಸತ್ತಿದ್ದಾನೆ ಎಂದು ವಿಮೆ ಹಣ (Insurance amount) ಕ್ಲೈಮ್ ಮಾಡಲು ಪ್ಲಾನ್ ಮಾಡಿದ್ದರು. ಹತ್ತು ದಿನಗಳ ನಂತರ ಸಿನಿಮೀಯ ಮಾದರಿಯಲ್ಲಿ ಕೊಲೆ ಮಾಡಿರುವ ರಹಸ್ಯ ಬಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ (Bharatiya Nyaya Sanhita) 304 ಅಡಿ ಗಂಡಸಿ (Gandasi) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

hassam murder 2

ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಕಾಣಿಸಿದ್ದು, ಪ್ರಕರಣದ ಬಗ್ಗೆ ಅನುಮಾನಗೊಂಡು ತನಿಖೆಗೆ ಇಳಿದಿದ್ದರು. ಪ್ರಕರಣದ ಬಗ್ಗೆ ಎಸ್ಪಿ ಮಹಮದ್ ಸುಜೀತಾಗೆ (Mohammad Sujeetha) ಮಾಹಿತಿ ನೀಡಿದ್ದರು. ಗಂಡಸಿ ಹಾಗೂ ಅರಸೀಕೆರೆ (Arsikere) ಪೊಲೀಸರು ತೀವ್ರ ತನಿಖೆಗೆ ಇಳಿದಿದ್ದ ವೇಳೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.ಇದನ್ನೂ ಓದಿ: ಚರಂಡಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವು

ಹೊಸಕೋಟೆಯಲ್ಲಿ (Hosakote) ಮುನಿಶ್ವಾಮಿಗೌಡ ಎಮ್‌ಎಫ್‌ಆರ್ ಟೈರ್ ಅಂಗಡಿಯನ್ನು ಇಟ್ಟುಕೊಂಡಿದ್ದ. ವಿಪರೀತ ಸಾಲವಿತ್ತು ಎನ್ನುವ ಕಾರಣದಿಂದ ಮುನಿಶ್ವಾಮಿಗೌಡ ತನ್ನ ಪತ್ನಿ ಶಿಲ್ಪರಾಣಿ ಹಾಗೂ ಸ್ನೇಹಿತರ ಜೊತೆಗೂಡಿ ಮಾಸ್ಟರ್ ಪ್ಲಾನ್ ಮಾಡಿದ್ದರು. ತನ್ನನ್ನೇ ಹೋಲುವ ವ್ಯಕ್ತಿಯನ್ನು ಮುನಿಶ್ವಾಮಿಗೌಡ ಹಾಗೂ ಅವನ ಪತ್ನಿ ಪರಿಚಯ ಮಾಡಿಕೊಂಡಿದ್ದರು. ಅದಾದ ಕೆಲ ದಿನಗಳ ನಂತರ ದಂಪತಿ ಅವನನ್ನು ಕೊಂದು ಇನ್ಸೂರೆನ್ಸ್ ಹಣ ದೋಚಲು ಸ್ಕೆಚ್ ಹಾಕಿದ್ದರು. ಒಂದು ದಿನ ಮುನಿಶ್ವಾಮಿಗೌಡ ಆ ವ್ಯಕ್ತಿಯನ್ನು ಶಿಡ್ಲಘಟ್ಟಗೆ ಹೋಗಿ ಬರೋಣ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದನು.

ಆ.12 ರಂದು ಅರಸೀಕೆರೆ ತಾಲ್ಲೂಕಿನ, ಗೊಲ್ಲರಹೊಸಳ್ಳಿ ಗೇಟ್ ಬಳಿಯ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಶವದ ಪಕ್ಕದಲ್ಲಿ ಲಾರಿ ಮತ್ತು ಕಾರು ಸಿಕ್ಕಿದೆ. ಸ್ಥಳಕ್ಕೆ ಆಗಮಿಸಿದ ಗಂಡಸಿ ಠಾಣೆಯ ಪೊಲೀಸರು ಅಪರಿಚಿತ ಮೃತದೇಹವನ್ನು ಪತ್ತೆಹಚ್ಚಲು ಮುಂದಾಗಿದ್ದು, ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದರು. ಆ.13 ರಂದು ಶಿಲ್ಪರಾಣಿ ಜಿಲ್ಲಾಸ್ಪತ್ರೆಗೆ ಬಂದು ಅಪರಿಚಿತ ಮೃತದೇಹವನ್ನು ಪತ್ತೆ ಹಚ್ಚಿ ಇದು ನನ್ನ ಪತಿ ಮುನಿಶ್ವಾಮಿಗೌಡ ಎಂದು ಗುರುತಿಸಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕೊಂಡೊಯ್ದು ಆ ದಿನ ಮುನಿಶ್ವಾಮಿಗೌಡನ ಸಂಬಂಧಿಕನಾಗಿದ್ದ ಶಿಡ್ಲಘಟ್ಟ (Sidlaghatta) ಇನ್ಸ್ಪೆಕ್ಟರ್ ಸಿಪಿಐ ಶ್ರೀನಿವಾಸ್ (SPI Srinivas) ಚಿಕ್ಕಕೋಲಿಗ ಗ್ರಾಮಕ್ಕೆ ಬಂದು ಮೃತದೇಹಕ್ಕೆ ಮಾಲಾರ್ಪಣೆ ಮಾಡಿದ್ದರು. ಅದೇ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾಳೆ.ಇದನ್ನೂ ಓದಿ: ಯಶವಂತಪುರ ಫ್ಲೈ ಓವರ್ ಕೆಳಗೆ ಸಿಲುಕಿದ ಬೃಹತ್ ಟ್ರಕ್

hassan murder 1

ಮೃತ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದ ಪೊಲೀಸರು ಹೊಸಕೋಟೆಯಲ್ಲಿರುವ ಮುನಿಶ್ವಾಮಿಗೌಡ ನಿವಾಸಕ್ಕೆ ತೆರಳಿ ಶಿಲ್ಪರಾಣಿ ವಿಚಾರಣೆಗೆ ಮುಂದಾಗಿದ್ದರು. ಆದರೆ ಶಿಲ್ಪರಾಣಿ ಈ ವೇಳೆ ನಾನು ಗಂಡನನ್ನು ಕಳೆದುಕೊಂಡು ದು:ಖದಲ್ಲಿದ್ದೇನೆ ಎಂದಿದ್ದಳು.

ಇದೆಲ್ಲ ನಡೆದ ಸ್ವಲ್ಪ ದಿನದ ಬಳಿಕ ಮುನಿಶ್ವಾಮಿಗೌಡ ತನ್ನ ಸಂಬಂಧಿಕನಾಗಿದ್ದ ಶಿಡ್ಲಘಟ್ಟ ಇನ್ಸ್ಪೆಕ್ಟರ್ ಶ್ರೀನಿವಾಸ್ ಮುಂದೆ ಹಾಜರಾಗಿದ್ದನು. ಮೃತಪಟ್ಟ ಮುನಿಶ್ವಾಮಿಗೌಡನನ್ನು ಕಂಡು ಕಕ್ಕಾಬಿಕ್ಕಿಯಾದ ಇನ್ಸ್ಪೆಕ್ಟರ್ ಶ್ರೀನಿವಾಸ್ ನಡೆದ ವಿಷಯದ ಕುರಿತು ಅವನನ್ನು ಪ್ರಶ್ನಿಸಿದಾಗ ಕೃತ್ಯ ಸಂಪೂರ್ಣ ಬಯಲಾಗಿದೆ.

ಹತ್ಯೆ ಮಾಡಿದ್ದು ಹೇಗೆ?
ತನ್ನಂತೆಯೇ ಇದ್ದ ವ್ಯಕ್ತಿಯನ್ನು ದಂಪತಿ ಪರಿಚಯ ಮಾಡಿಕೊಂಡು ಇನ್ಸೂರೆನ್ಸ್ ಹಣ ದೋಚಲು ಸ್ಕೆಚ್ ಹಾಕಿದ್ದರು. ಶಿಡ್ಲಘಟ್ಟಗೆ ಹೋಗಿ ಬರೋಣ ಎಂದು ಆತನನ್ನು ಜೊತೆಯಲ್ಲಿ ಕಾರಿನಲ್ಲಿ ಕರೆದುಕೊಂಡು ಹೋಗಿ, ಕಾರು ಪಂಕ್ಚರ್ ಆಗಿದೆ ಎಂದು ಗೊಲ್ಲರಹೊಸಳ್ಳಿ ಗೇಟ್ ಬಳಿ ಮುನಿಶ್ವಾಮಿಗೌಡ ಕಾರು ನಿಲ್ಲಿಸಿದನು. ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ ವ್ಯಕ್ತಿಯನ್ನು ಟೈರ್ ಚೇಂಜ್ ಮಾಡುವಂತೆ ಹೇಳಿದ್ದನು. ಆಕ್ಸಿಡೆಂಟ್ ರೀತಿ ಬಿಂಬಿಸಲು ಲಾರಿಯನ್ನು ಬುಕ್ ಮಾಡಿದ್ದು, ಕಾರನ್ನೇ ಹಿಂಬಾಲಿಸಿಕೊಂಡು ಬಂದಿದೆ. ಟೈರ್ ಚೇಂಜ್ ಮಾಡುತ್ತಿದ್ದ ವೇಳೆ ಕುತ್ತಿಗೆಗೆ ಚೈನ್ ಹಾಕಿ ರಸ್ತೆಗೆ ಎಳೆದು ಅಪರಿಚಿತನ ಮೇಲೆ ಲಾರಿ ಹಾಯಿಸಿ ಮೃತಪಟ್ಟಿದ್ದಾನೆಂದು ಖಚಿತ ಪಡಿಸಿಕೊಳ್ಳಲು ರಿವರ್ಸ್ ಬಂದು ಮತ್ತೆ ವ್ಯಕ್ತಿಯ ಮೇಲೆ ಲಾರಿ ಚಲಾಯಿಸಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಲಾರಿಯಿಂದ ಕಾರಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆ.

ತನ್ನ ಪ್ಲ್ಯಾನ್ ಪ್ರಕಾರವೇ ನಡೆದಿದೆ ಎಂದು ಮುನಿಶ್ವಾಮಿಗೌಡ ತಲೆಮರೆಸಿಕೊಂಡಿದ್ದನು. ಹೊರಗೆ ಏನು ನಡೆಯುತ್ತಿದೆ ಎಂದು ತಿಳಿಯದೆ ಹಾಗೂ ಭಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮುನಿಶ್ವಾಮಿಗೌಡ ಬೇರೆ ದಾರಿಯಿಲ್ಲದೇ ಸ್ವಲ್ಪ ದಿನಗಳ ಬಳಿಕ ಹೊರಬಂದಿರುವುದಾಗಿ ಮುನಿಶ್ವಾಮಿಗೌಡ ಶಿಡ್ಲಘಟ್ಟ ಇನ್ಸ್ಪೆಕ್ಟರ್ ಶ್ರೀನಿವಾಸ್ ಬಳಿ ನಡೆದಿದ್ದನ್ನು ಹೇಳಿಕೊಂಡಿದ್ದಾನೆ.ಇದನ್ನೂ ಓದಿ: ನಾನು ಸೆಲೆಬ್ರಿಟಿಯೇ ಹೊರತು ಸಾರ್ವಜನಿಕರ ಆಸ್ತಿಯಲ್ಲ- ಟ್ರೋಲಿಗರಿಗೆ ತಾಪ್ಸಿ ಪನ್ನು ವಾರ್ನಿಂಗ್

ಈ ವೇಳೆ ನಾನು ಕಾರು ಚಲಾಯಿಸುವಾಗ ಆಕ್ಸಿಡೆಂಟ್ ಮಾಡಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಮುನಿಶ್ವಾಮಿಗೌಡ ಒಪ್ಪಿಕೊಂಡಿದ್ದಾನೆ. ಅನುಮಾನಗೊಂಡು ಮುನಿಶ್ವಾಮಿಗೌಡನನ್ನು ಇನ್ಸ್ಪೆಕ್ಟರ್ ಶ್ರೀನಿವಾಸ್ ಗಂಡಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಮಾಹಿತಿ ನೀಡದೇ ಪತ್ನಿ ಶಿಲ್ಪರಾಣಿಯನ್ನು ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ಆಗ ಮತ್ತದೇ ನಾಟಕವಾಡಿದ್ದಾಳೆ. ಬದುಕಿದ್ದ ಗಂಡನನ್ನು ತೋರಿಸಿದಾಗ ನಟೋರಿಯಸ್ ನಾಟಕ ಬಯಲಾಗಿದೆ. ಈ ಮರ್ಡರ್ ಮಿಸ್ಟ್ರಿ ಪ್ರಕರಣದಲ್ಲಿ ಭಾಗಿಯಾಗಿರುವ ಹಲವರ ಕುರಿತು ತನಿಖೆ ನಡೆಯುತ್ತಿದ್ದು. ಇನ್ನೂ ಕೊಲೆಯಾದ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಕೊಲೆಗಡುಕ ದಂಪತಿಯನ್ನು ವಶಕ್ಕೆ ಪಡೆದು ಗಂಡಸಿ ಪೊಲೀಸರು ಈ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.

Share This Article