ಕುತೂಹಲ ಮೂಡಿಸಿದ ಪ್ರಿಯಾಂಕಾ ಚೋಪ್ರಾ, ಡೈರೆಕ್ಟರ್‌ ಮಧುರ್‌ ಭೇಟಿ- ‘ಫ್ಯಾಷನ್ 2’ ಚಿತ್ರದ ಬಗ್ಗೆ ಮಾತುಕತೆ?

Public TV
1 Min Read
PRIYANKA CHOPRA 2

ಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಸಿನಿಮಾಗಳಲ್ಲಿ ನಟಿಸದೆ ಹಲವು ವರ್ಷಗಳೇ ಕಳೆದಿವೆ. ಅವರ ಹಿಂದಿ ಸಿನಿಮಾಗಾಗಿ ಎದುರು ನೋಡ್ತಿರುವ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿ ಸಿಕ್ಕಿದೆ. ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಪ್ರಿಯಾಂಕಾರನ್ನು ಭೇಟಿಯಾದ ಬೆನ್ನಲ್ಲೇ ‘ಫ್ಯಾಷನ್’ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ. ಮತ್ತೆ ನಟಿ ಬಾಲಿವುಡ್‌ನಲ್ಲಿ ನಟಿಸುವ ಸುಳಿವು ಸಿಕ್ಕಿದೆ.

priyanka chopra 1 1

ಡೈರೆಕ್ಟರ್ ಮಧುರ್ ಭಂಡಾರ್ಕರ್ (Madhur Bhandarkar) ಅವರು ಅಮೆರಿಕಗೆ ತೆರಳಿ ಪ್ರಿಯಾಂಕಾ ಚೋಪ್ರಾರನ್ನು ಭೇಟಿಯಾಗಿದ್ದಾರೆ. ನಟಿಯ ನಿವಾಸದಲ್ಲಿ ಕೆಲ ಹೊತ್ತು ಅವರ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ಪ್ರಿಯಾಂಕಾ ಜೊತೆಗಿನ ಭೇಟಿಯ ಫೋಟೋವನ್ನು ಮಧುರ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ತಿದ್ದಂತೆ ‘ಫ್ಯಾಷನ್’ ಚಿತ್ರದ ಸೀಕ್ವೆಲ್ ಬರುವ ಕುರಿತು ಚರ್ಚೆ ಶುರುವಾಗಿದೆ. ಇಬ್ಬರ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸದ್ಯದಲ್ಲೇ ‘ಫ್ಯಾಷನ್‌ 2’ (Fashion 2) ಬಗ್ಗೆ ಮಾಹಿತಿ ಸಿಗುತ್ತಾ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಅಂದಹಾಗೆ, 2018ರಲ್ಲಿ ಕಂಗನಾ ರಣಾವತ್ (Kangana Ranaut) ಜೊತೆ ಪ್ರಿಯಾಂಕಾ ಚೋಪ್ರಾ ‘ಫ್ಯಾಷನ್’ (Fashion) ಎಂಬ ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ಮಧುರ್ ಭಂಡಾರ್ಕರ್ ನಿರ್ದೇಶನ ಮಾಡಿದ್ದರು. ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು. ಇದನ್ನೂ ಓದಿ:ಪತ್ನಿ ಜೊತೆ ಮೆಗಾಸ್ಟಾರ್ ಚಿರಂಜೀವಿ ಟೆಂಪಲ್ ರನ್

ನಿಕ್ ಜೊತೆಗಿನ ಮದುವೆಯ ನಂತರ ಅಮೆರಿಕದಲ್ಲಿ ನಟಿ ಪ್ರಿಯಾಂಕಾ ಸೆಟಲ್ ಆಗಿದ್ದಾರೆ. ವೈವಾಹಿಕ ಬದುಕಿನ ಜೊತೆ ಕೆರಿಯರ್‌ ಅನ್ನು ಬ್ಯಾಲೆನ್ಸ್‌ ಮಾಡುತ್ತಾ,  ಹೆಚ್ಚೆಚ್ಚು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಂಗ್ಲಿಷ್ ಸಿನಿಮಾದಲ್ಲಿಯೂ ಅವರಿಗೆ ಬೇಡಿಕೆ ಹೆಚ್ಚಾಗಿದೆ.

Share This Article