ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್

Public TV
2 Min Read

– ಆ.29 ರ ವರೆಗೆ ಯಾವುದೇ ಆದೇಶ ನೀಡದಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ‘ಹೈ’ ಸೂಚನೆ
– FIR, ವಿಚಾರಣೆಯಿಂದ ಸಿಎಂಗೆ ತಾತ್ಕಾಲಿಕ ರಿಲೀಫ್‌

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಹೈಕೋರ್ಟ್‌ ತಾತ್ಕಾಲಿಕ ರಿಲೀಫ್‌ ನೀಡಿದೆ. ಸದ್ಯಕ್ಕೆ ಯಾವುದೇ ಎಫ್‌ಐಆರ್‌ ದಾಖಲಾಗಲು ಅನುಮತಿ ಸಿಗದ ಕಾರಣ ಸಿಎಂ ಬಿಸೋ ದೊಣ್ಣೆಯಿಂದ ಪಾರಾಗಿದ್ದಾರೆ.

ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್ (Karnataka High Court) ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆ.29ರ ವರೆಗೆ ಯಾವುದೇ ಆದೇಶ ನೀಡಿದಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದೆ. ಇದನ್ನೂ ಓದಿ: ನೈತಿಕತೆ ಇದ್ದರೆ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ಕೊಡಲಿ: ಎಸ್.ಆರ್.ಹಿರೇಮಠ್

HIGHCOURT

ಎಫ್‌ಐಆರ್ ದಾಖಲಾಗುವ ಭಯದಲ್ಲಿದ್ದ ಸಿಎಂಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ. ಕೆಳಹಂತದ ನ್ಯಾಯಾಲಯ ವಿಚಾರಣೆಗೆ ಅಸ್ತು ಅಂದಿದ್ರೆ ಸಿಎಂ ಮೇಲೆ ಪಿಸಿಆರ್ ದಾಖಲಾಗುತ್ತಿತ್ತು. ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಹಾಗೂ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿತ್ತು. ಆದರೆ ಇದೀಗ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

10 ದಿನಗಳವರೆಗೆ ವಿಚಾರಣಾ ನ್ಯಾಯಾಲಯ ಯಾವುದೇ ಆದೇಶ, ತೀರ್ಮಾನ ಪ್ರಕಟಿಸುವಂತಿಲ್ಲ ಎಂದು ಹೈಕೋರ್ಟ್‌ ಸೂಚಿಸಿದೆ. ಇದನ್ನೂ ಓದಿ: ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ

siddaramaiah muda scam 1 1

ತಾತ್ಕಾಲಿಕ ರಿಲೀಫ್‌ ಹೇಗೆ?
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಬೇಕೋ ಅಥವಾ ಬೇಡವೋ ಎಂಬ ನಿಟ್ಟಿನಲ್ಲಿ ನ್ಯಾಯಾಲಯ ಏನು ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಇತ್ತು. ಈಗಾಗಲೇ ವಿಚಾರಣೆ ನಡೆಸಿದ್ದ ಕೋರ್ಟ್‌ ಆ.20 ಮಂಗಳವಾರ ವಿಚಾರಣೆಗೆ ಅಸ್ತು ಅಂದಿದ್ರೆ ಸಿಎಂ ಮೇಲೆ ಪಿಸಿಆರ್ ದಾಖಲಾಗುತ್ತಿತ್ತು. ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಹಾಗೂ ಕುಟುಂಬದ ವಿರುದ್ಧ ಎಫ್‌ಐಆರ್‌ ದಾಖಲಾಗ್ತಿತ್ತು.

ಈಗ ಹೈಕೋರ್ಟ್‌ ಆಗಸ್ಟ್‌ 29 ರವರೆಗೆ ವಿಚಾರಣೆ ಮುಂದೂಡಿದೆ ಜೊತೆಗೆ 10 ದಿನಗಳವರೆಗೆ ವಿಚಾರಣಾ ನ್ಯಾಯಾಲಯ ಯಾವುದೇ ಆದೇಶ, ತೀರ್ಮಾನ ಪ್ರಕಟಿಸುವಂತಿಲ್ಲ ಎಂದು ಆದೇಶಿಸಿದೆ. ಇದರಿಂದಾಗಿ ಜನಪ್ರತಿನಿಧಿಗಳ ಕೋರ್ಟ್‌ ಆದೇಶಕ್ಕೂ ತಡೆ ಸಿಕ್ಕಿದಂತಾಗಿದೆ. ಹೈಕೋರ್ಟ್‌ ಮಧ್ಯಂತರ ಆದೇಶದಿಂದ ಸಿಎಂಗೆ ಆ.29ರವರೆಗೆ ರಿಲೀಫ್‌ ಸಿಕ್ಕಿದಂತಾಗಿದೆ. ಇದನ್ನೂ ಓದಿ: ನಾನು ಯಾವುದೇ ತಪ್ಪು ಮಾಡಿಲ್ಲ.. ನ್ಯಾಯಾಲಯದಲ್ಲಿ ಪರಿಹಾರ ಸಿಗುವ ವಿಶ್ವಾಸ ಇದೆ: ಸಿದ್ದರಾಮಯ್ಯ

Share This Article