ಬೆಂಗಳೂರು: ಕನ್ನಡದ ಫೇಮಸ್ ನಟರಾದ ದರ್ಶನ್ ಮತ್ತು ಸುದೀಪ್ ನಡುವಿನ ಗೆಳತನದ ಬಗ್ಗೆ ಟ್ವಿಟ್ಟರ್‍ನಲ್ಲಿ ಬ್ರೇಕ್ ಆಗಿದ್ದು, ಇದರ ಹಿಂದೆ ದೊಡ್ಡ ಕಥೆಯಿದೆ. ಅದನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ನಟ ಬುಲೆಟ್ ಪ್ರಕಾಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ದರ್ಶನ್ ಮತ್ತು ಸುದೀಪ್ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದು, ಇವರ ನಡುವೆ ಈಗಲೂ ಸ್ನೇಹವಿದೆ. ಇಂಡಸ್ಟ್ರಿಯಲ್ಲಿ ಎಲ್ಲರೂ ಸ್ನೇಹಿತರಂತಿರಬೇಕು. ನನ್ನ ಮತ್ತು ದರ್ಶನ್‍ಗೂ ಜಗಳ ಆಗುವಂತೆ ಮಾಡಿದ್ದು ಸಹ ಮೂರನೇ ವ್ಯಕ್ತಿ. ಇವರಿಬ್ಬರ ಸ್ನೇಹದ ಮಧ್ಯೆ ಮೂರನೇ ವ್ಯಕ್ತಿಯೊಬ್ಬರು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನನಗೆ ಗೊತ್ತಿರುವ ಹಾಗೆ ದರ್ಶನ್ ಅವರು ಹೆಚ್ಚಾಗಿ ಮೊಬೈಲ್ ಆಪರೇಟ್ ಮಾಡುವುದಿಲ್ಲ. ದರ್ಶನ್ ಅವರು ನನಗೆ ಕೆಲಸ ಕೊಡಲಿ ಎಂದು ನಾನಿದನ್ನು ಹೇಳುತ್ತಿಲ್ಲ. ನಾನು ತುಂಬಾ ಹತ್ತಿರದಿಂದ ಅವರನ್ನು ನೋಡಿದ್ದೇನೆ ಎಂದು ಬುಲೆಟ್ ಪ್ರಕಾಶ್ ಹೇಳಿದ್ದಾರೆ.
ದರ್ಶನ್ ಮತ್ತು ಸುದೀಪ್ ನಡುವೆ ವೈಮನಸ್ಸು ಮೂಡಿದ್ದು ಹೇಗೆ? ಅದರ ಹಿಂದಿನ ರಹಸ್ಯವೇನು? ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೋ ಅಪ್ ಲೋಡ್ ಮಾಡಿದ್ದು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಬುಲೆಟ್ ಪ್ರಕಾಶ್ ಇಂದು ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನು ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!
ಇದನ್ನು ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?
ಇದನ್ನು ಓದಿ: ಇಷ್ಟೆಲ್ಲಾ ಟ್ವೀಟ್ ಮಾಡಿದ್ದು ನಾನೇ, ಖಾತೆ ಹ್ಯಾಕ್ ಆಗಿಲ್ಲ: ದರ್ಶನ್ ಸ್ಪಷ್ಟನೆ