ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

Public TV
1 Min Read
darshan twitter

ಬೆಂಗಳೂರು: ನಾವಿಬ್ಬರೂ ಗೆಳೆಯರಲ್ಲ ಎಂದು ದರ್ಶನ್ ಟ್ವಿಟ್ಟರ್ ಖಾತೆಯಿಂದ ಸುದೀಪ್ ಬಗ್ಗೆ ಟ್ವೀಟ್ ಆಗಿದ್ದು ಭಾನುವಾರ ರಾತ್ರಿ 8.15ಕ್ಕೆ. ಇದಕ್ಕೂ ಮುನ್ನ ಸುದೀಪ್ ಟ್ವಿಟ್ಟರ್ ಖಾತೆಯಲ್ಲೂ ಇಬ್ಬರ ಗೆಳೆತನದ ಬಗ್ಗೆ ಒಂದು ಟ್ವೀಟ್ ಕಾಣಿಸಿತ್ತು.

ಶಶಿಧರ್ ಪಾಟೀಲ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ಸುದೀಪ್ ಅವರ ಟ್ವಿಟ್ಟರ್ ಹ್ಯಾಂಡಲ್ ಗೆ, @ಕಿಚ್ಚ ಸುದೀಪ್ ಸರ್, ನಿಮ್ಮನ್ನು ಹಾಗೂ ದರ್ಶನ್ ಅವರನ್ನು ಜೊತೆಯಾಗಿ ನಾವು ನೋಡಬೇಕು. ಒಂದೇ ವೇದಿಕೆಯಲ್ಲಿ ನೀವಿಬ್ಬರು ಜೊತೆಯಾಗಿರುವುದನ್ನು ನೋಡಿ ತುಂಬಾ ಸಮಯವಾಯಿತು ಎಂದು ಬರೆದಿದ್ದರು. ಈ ಟ್ವೀಟ್ ಸಂಜೆ 4.15ಕ್ಕೆ ಟ್ವೀಟ್ ಆಗಿತ್ತು.

ಈ ಟ್ವೀಟ್ ಬಂದು ಕೇವಲ 9 ನಿಮಿಷದ ಬಳಿಕ ಅಂದ್ರೆ ಸರಿಯಾಗಿ 4.24ಕ್ಕೆ ಕಿಚ್ಚ ಸುದೀಪ್ ಅವರು ಶಶಿಧರ್ ಪಾಟೀಲ್ ಗೆ ಉತ್ತರವನ್ನೂ ಕೊಟ್ಟಿದ್ದರು. ಆದರೆ ಆ ಉತ್ತರದಲ್ಲಿ ಕೇವಲ ಸ್ಮೈಲಿ ಸಿಂಬಲ್ ಮಾತ್ರ ಇತ್ತು.

is indrajith lankesh next with sudeep and darshan 01 1459505829

ಆದರೆ ರಾತ್ರಿ 8.15ಕ್ಕೆ ಮಾತ್ರ ದರ್ಶನ್ ಅವರ @ದಾಸದರ್ಶನ್ ಖಾತೆಯಿಂದ, ‘ನಾವಿಬ್ಬರೂ ಗೆಳೆಯರಲ್ಲ. ನಾವು ಕನ್ನಡ ಇಂಡಸ್ಟ್ರಿಗಾಗಿ ದುಡಿಯುತ್ತಿರುವ ನಟರು ಅಷ್ಟೇ. ದಯವಿಟ್ಟು ಈ ಬಗ್ಗೆ ಹೆಚ್ಚು ವದಂತಿಗಳು ಬೇಡ. ಇದಿಲ್ಲಿಗೇ ಕೊನೆಯಾಗಲಿ’ ಎಂಬ ಟ್ವೀಟ್ ಬಂದಿತ್ತು.

ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!

ಇದನ್ನು ನೋಡಿದ ಅಭಿಮಾನಿಗಳಿಗೆ ಈ ಟ್ವೀಟ್ ನಂಬಲು ಸಾಧ್ಯವಾಗಲೇ ಇಲ್ಲ. ಅದಕ್ಕಾಗಿ ಅಭಿಮಾನಿಗಳೆಲ್ಲಾ ಯಾಕೆ ಹೀಗೆ ಎಂದು ದರ್ಶನ್ ಅವರ ಟ್ವಿಟ್ಟರ್ ಖಾತೆಗೇ ಪ್ರಶ್ನೆ ಹಾಕುತ್ತಿದ್ದರು.

s and d 1

 

Share This Article
Leave a Comment

Leave a Reply

Your email address will not be published. Required fields are marked *