ತೆಲುಗು ನಟಿ ಶೋಭಿತಾ (Sobhita) ಜೊತೆ ನಾಗಚೈತನ್ಯ(Nagachaitanya) ನಿಶ್ಚಿತಾರ್ಥ ನಡೆದ ಬೆನ್ನಲ್ಲೇ ಸಮಂತಾ ಕುರಿತು ಅಪಪ್ರಚಾರ ಮಾಡುವ ಕೆಲಸ ನಡೆಯುತ್ತಿದೆ. ಕೆಲ ಕಿಡಿಗೇಡಿಗಳು ಬಾಲಿವುಡ್ ಡೈರೆಕ್ಟರ್ ರಾಜ್ ಜೊತೆ ನಟಿಯ ಮರು ಮದುವೆ ಎಂದೆಲ್ಲಾ ಸುದ್ದಿ ಹಬ್ಬಿಸಿದ್ದು, ಅದಕ್ಕೆಲ್ಲಾ ಈಗ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ನಟಿ ಖಡಕ್ ಆಗಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಟೀಸರ್ ರಿಲೀಸ್
ನಟಿಯ ಮುಖದ ಮೇಲೆ ಮಧ್ಯೆ ಕೈ ಬೆರಳು ಇಟ್ಟುಕೊಂಡು ಪೋಸ್ ನೀಡಿದ್ದಾರೆ. ಕಂದು ಬಣ್ಣದ ಟೀ ಶರ್ಟ್ ಅನ್ನು ಸಮಂತಾ (Samantha) ಧರಿಸಿದ್ದಾರೆ. ಅದಕ್ಕೆ ‘ನೌ ಆರ್ ಫ್ರೀ’ ಎಂಬ ಸಾಂಗ್ ಅನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಯಾರು ಅದಷ್ಟೇ ವದಂತಿ ಹಬ್ಬಿಸಿದರೂ ತಾವು ಕೂಲ್ ಆಗಿಯೇ ಇರೋದಾಗಿ ಪರೋಕ್ಷವಾಗಿ ನಟಿ ತಿರುಗೇಟು ನೀಡಿದ್ದಾರೆ.
View this post on Instagram
ಅಂದಹಾಗೆ, ಹಲವು ವರ್ಷಗಳು ಪ್ರೀತಿಸಿ 2017ರಲ್ಲಿ ನಾಗಚೈತನ್ಯರನ್ನು ನಟಿ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಘೋಷಣೆ ಮಾಡಿದರು. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ & ಗ್ಯಾಂಗ್ ಕೂದಲು ಸ್ಯಾಂಪಲ್ ಡಿಎನ್‌ಎ ವರದಿಗೆ ಮ್ಯಾಚ್
ಒಂಟಿಯಾಗಿರುವ ಸಮಂತಾ ಅವರು ತಮ್ಮ ಆರೋಗ್ಯದ ಕಡೆ ಗಮನ ಕೊಡುತ್ತಾ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.