ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tharun Sudheer) ಮತ್ತು ನಟಿ ಸೋನಲ್ (Sonal Monteiro) ಮದುವೆ ಇಂದು (ಭಾನುವಾರ) ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ನಡೆಯಿತು.
ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು. ಇದನ್ನೂ ಓದಿ: ತರುಣ್-ಸೋನಲ್ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್ ತಾರೆಯರು, ಗಣ್ಯರಿಂದ ವಿಶ್
ತರುಣ್ -ಸೋನಲ್ ಮದುವೆಗೆ ಅದ್ದೂರಿ ಧಾರೆ ಮಂಟಪ ಸೆಟ್ ಹಾಕಲಾಗಿದೆ. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ಅಲಂಕಾರ ಮಾಡಲಾಗಿತ್ತು. ಇದನ್ನೂ ಓದಿ: ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ
ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಸಿದ್ದತೆ ಮಾಡಿದ್ದು ವಿಶೇಷವಾಗಿತ್ತು. ನಟ ಶರಣ್, ನೆನಪಿರಲಿ ಪ್ರೇಮ್, ಶ್ರುತಿ, ಮಾಲಾಶ್ರೀ, ಸುಧಾರಾಣಿ, ಅವಿನಾಶ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವರು ಗಣ್ಯರು ಮದುವೆಗೆ ಸಾಕ್ಷಿಯಾದರು. ನಿನ್ನೆ ಸಂಜೆ ನಡೆದ ತರುಣ್ ಮತ್ತು ಸೋನಾಲ್ ಆರತಕ್ಷತೆಯಲ್ಲೂ ಚಿತ್ರರಂಗ, ರಾಜಕೀಯ ಗಣ್ಯರು ಭಾಗಿಯಾಗಿದ್ದರು. ನೂತನ ಜೋಡಿಗೆ ಶುಭ ಹಾರೈಸಿದರು.