– ರಾತ್ರೋರಾತ್ರಿ ಠಾಣೆ ಮೆಟ್ಟಿಲೇರಿದ ಕುಟುಂಬ
ಧಾರವಾಡ: ಇಲ್ಲಿನ (Dharwad) ಅಂಜುಮನ್ ಸಂಸ್ಥೆ ಅಧ್ಯಕ್ಷ (Anjuman President) ಹಾಗೂ ಕಾಂಗ್ರೆಸ್ (Congress) ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
10ಕ್ಕೂ ಹೆಚ್ಚು ಜನ ಅಪರಿಚಿತರು ತಮಟಗಾರ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಯುವಕರು ತಮಟಗಾರ ಅವರ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಟಗಾರ ಅವರು ಮನೆಯಲ್ಲಿರದೆ, ಬೆಂಗಳೂರಿನಲ್ಲಿ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇದನ್ನೂ ಓದಿ: ಕೇಸ್‌ನಿಂದ ತಪ್ಪಿಸಿಕೊಳ್ಳೋದಕ್ಕೆ ರಾಜಕಾರಣಿಗಳ ಸಹಾಯ ಬಯಸಿದ್ರಾ ದರ್ಶನ್? – ಸ್ಫೋಟಕ ರಹಸ್ಯ ಬಯಲು
ಇಸ್ಮಾಯಿಲ್ ಅವರ ಮೇಲೆ ಲಂಗೋಟಿ ಜಮಾದಾರ್ ಗಲ್ಲಿ, ಅಂಜುಮನ್ ಹಾಸ್ಟೆಲ್ ಬಳಿ ಹಲ್ಲೆ ನಡೆಸಲು ಈ ಯುವಕರು ಗುಂಪು ತಯಾರಾಗಿತ್ತು. ಇಸ್ಮಾಯಿಲ್ ಅವರ ಊರಲ್ಲಿ ಇಲ್ಲದೇ ಹೋಗಿದ್ದರಿಂದ ಆತಂಕಗೊಂಡಿರುವ ಅವರ ಮನೆಯವರು ಧಾರವಾಡದ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮಟಗಾರ ಅವರ ಕುಟುಂಬ ತಮಗೆ ಜೀವ ಭಯವಿದೆ. ರಕ್ಷಣೆ ನೀಡಬೇಕು ಎಂದು ಹಿಂದೆಯೇ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಇದು ಮೋದಿ ಭಾರತ, ಬಾಂಗ್ಲಾದೇಶದಂತಹ ಪರಿಸ್ಥಿತಿ ಉಂಟಾಗಲ್ಲ; ಕಾಂಗ್ರೆಸ್‌ಗೆ ಶೇಖಾವತ್ ತಿರುಗೇಟು