ಸೆಟ್ಟೇರಿತು ‘ಕೆಜಿಎಫ್’ ಡೈರೆಕ್ಟರ್ ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾ

Public TV
1 Min Read
jr ntr

ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಮತ್ತು ಜ್ಯೂ.ಎನ್‌ಟಿಆರ್ (Jr.Ntr) ಕಾಂಬಿನೇಷನ್‌ನ ಹೊಸ ಸಿನಿಮಾದ ಮುಹೂರ್ತ ಇಂದು (ಆ.9) ಹೈದರಾಬಾದ್‌ನಲ್ಲಿ ಸರಳವಾಗಿ ಜರುಗಿದೆ. ‘ದೇವರ’ (Devara Film) ಬಳಿಕ ತಾರಕ್ ನಟನೆಯ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

FotoJet 24

ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಜ್ಯೂ.ಎನ್‌ಟಿಆರ್ ನಟನೆಯ 31ನೇ ಸಿನಿಮಾದ ಮುಹೂರ್ತ ಕಾರ್ಯಕ್ರಮ ಸಂಭ್ರಮದಿಂದ ಜರುಗಿದೆ. ಈ ವೇಳೆ, ಚಿತ್ರತಂಡದ ಜೊತೆ ತಾರಕ್ ಸಹೋದರ ಕಲ್ಯಾಣ್ ರಾಮ್ ಕುಟುಂಬ, ಪ್ರಶಾಂತ್ ನೀಲ್ ಕುಟುಂಬಸ್ಥರಷ್ಟೇ ಭಾಗಿಯಾಗಿದ್ದರು. ಇದನ್ನೂ ಓದಿ:DKD: ಧನುಷ್ ಡ್ಯಾನ್ಸ್ ನೋಡಿ ಫೋನ್ ಕರೆ ಮಾಡಿದ ಯಶ್

FotoJet 1 8

ಈ ಸಿನಿಮಾವನ್ನು 2026ರ ಜನವರಿ 9ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ವಿಭಿನ್ನ ಕಥಾಹಂದರ ಇಟ್ಟುಕೊಂಡೆ ತಾರಕ್‌ಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಲು ಹೊರಟಿದ್ದಾರೆ. ಅಂದಹಾಗೆ, ಜ್ಯೂ.ಎನ್‌ಟಿಆರ್‌ಗೆ ರಶ್ಮಿಕಾ ಮಂದಣ್ಣ ನಾಯಕಿ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ತಿಳಿಸಬೇಕಿದೆ.

ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡೋದಾಗಿ ಘೋಷಣೆ ಮಾಡಿದ್ರೂ ಕೂಡ ಇತ್ತೀಚೆಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿ ಮುಹೂರ್ತ ಕಾರ್ಯಕ್ರಮ ಮಾಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

Share This Article