ಟಾಲಿವುಡ್ ನಟಿ ನಿಹಾರಿಕಾ ಕೊನಿಡೆಲಾ (Niharika Konidela) ಪ್ರಸ್ತುತ ನಿರ್ಮಾಪಕಿಯಾಗಿಯೂ ಸದ್ದು ಮಾಡುತ್ತಿದ್ದಾರೆ. ಸದ್ಯ ನಟಿಯ ನಿರ್ಮಾಣದ ‘ಕಮಿಟಿ ಕುರ್ರಾಲು’ ರಿಲೀಸ್‌ಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ, ಅಣ್ಣನ ಗೆಳೆಯನ ಮೇಲಿನ ಪ್ರೀತಿಯ ಬಗ್ಗೆ ನಿಹಾರಿಕಾ ಮಾತನಾಡಿದ್ದಾರೆ.
ನಾಯಕಿಯಾಗಿ ನಿಹಾರಿಕಾಗೆ ಸಕ್ಸಸ್ ಸಿಗಲಿಲ್ಲ. ಬಳಿಕ ದಾಂಪತ್ಯ ಜೀವನ ಕೂಡ ಅವರ ಕೈಹಿಡಿಯಲಿಲ್ಲ. ಈಗ ನಿರ್ಮಾಪಕಿಯಾಗಿ ಟಾಲಿವುಡ್‌ನಲ್ಲಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಡಿವೋರ್ಸ್ ಬಳಿಕ ಪ್ರೀತಿಯ ಬಗ್ಗೆನಿಹಾರಿಕಾ ಆಡಿರುವ ಮಾತು ಈಗ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನೂ ಓದಿ:ಬದುಕಿನಲ್ಲಿ ಎದುರಿಸಿದ ಏರಿಳಿತಗಳ ಬಗ್ಗೆ ಮಾತನಾಡಿದ ಸಮಂತಾ
ಸಂದರ್ಶನವೊಂದರಲ್ಲಿ ನಟಿಗೆ ಮಹೇಶ್ ಬಾಬು, ಎನ್‌ಟಿಆರ್, ಪ್ರಭಾಸ್, ಇವರಲ್ಲಿ ಯಾರನ್ನು ಇಷ್ಟಪಡುತ್ತೀರಿ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಕೊಂಚವೂ ಯೋಚಿಸದೆ ಪ್ರಭಾಸ್ ಎಂದು ಹೇಳಿದರು. ನಾನು ಪ್ರಭಾಸ್‌ರನ್ನು ಇಷ್ಟಪಡುತ್ತೇನೆ. ಅವರ ಹಾಸ್ಯ ನನಗಿಷ್ಟ ಎಂದು ನಟಿ ಮಾತನಾಡಿದ್ದಾರೆ. ಅವರ ಹೇಳಿಕೆ ಈಗ ಭಾರೀ ಸದ್ದು ಮಾಡುತ್ತಿದೆ.
ಅಂದಹಾಗೆ, ರಾಮ್ ಚರಣ್ ಆತ್ಮೀಯ ಸ್ಮೇಹಿತರಲ್ಲಿ ನಿಹಾರಿಕಾ ಕೂಡ ಒಬ್ಬರು. ಅದಲ್ಲದೇ, ವರುಣ್ ತೇಜ್ ಕೂಡ ನನಗೆ ಪ್ರಭಾಸ್ ಎಂದರೆ ಇಷ್ಟ ಅಂತ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ.