Paris Olympics 2024: ಭಾರತಕ್ಕೆ ಮೊದಲ ಪದಕ – ಐತಿಹಾಸಿಕ ಗೆಲುವಿನೊಂದಿಗೆ ಕಂಚು ಗೆದ್ದ ಮನು ಭಾಕರ್‌

Public TV
1 Min Read
Manu Bhakar 2

ಪ್ಯಾರಿಸ್‌: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics 2024) ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. 10 ಮೀಟರ್‌ ಏರ್‌ ಪಿಸ್ತೂಲ್‌ (Women’s Air Rifle final) ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಮನು ಭಾಕರ್‌ (Manu Bhaker) ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

Points

ಶನಿವಾರ ಫೈನಲ್‌ ಪ್ರವೇಶಿಸಿದ್ದ 22 ವರ್ಷ ವಯಸ್ಸಿನ ಮನು ಭಾಕರ್‌ ಮೂರನೇ ದಿನವಾದ ಭಾನುವಾರ (ಜು.28) ಅಂತಿಮ ಸುತ್ತಿನಲ್ಲಿ 3ನೇ ಸ್ಥಾನ ಪಡೆದುಕೊಂಡರು. ಈ ಮೂಲಕ ಶೂಟಿಂಗ್‌ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಸುಮಾ ಶಿರೂರ್‌ ಕೊನೆಯ ಬಾರಿಗೆ ಫೈನಲ್‌ ತಲುಪಿದ್ದರು. ಇದು ಈವರೆಗಿನ ಸಾಧನೆಯಾಗಿತ್ತು. ಇದನ್ನೂ ಓದಿ: Paris Olympics 2024: ಚಿನ್ನಕ್ಕೆ ಗುರಿಯಿಟ್ಟ ಶೂಟರ್‌ – ಚೀನಾಗೆ ಮೊದಲ ಚಿನ್ನದ ಪದಕ

Manu Bhaker

ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಓಹ್ ಯೇ ಜಿನ್ 243.2, ಕಿಮ್‌ ಯೇಜಿ 241.3 ಅಂಕ ಪಡೆದರೆ, 22 ಶಾಟ್‌ ಗಳ ಬಳಿಕ ಮನು ಭಾಕರ್‌ 221.7 ಅಂಕ ಪಡೆದು ಮೂರನೇ ಸ್ಥಾನ ಪಡೆದರು. ಇದರೊಂದಿಗೆ ಶೂಟಿಂಗ್‌ ವಿಭಾಗದಲ್ಲಿ 12 ವರ್ಷಗಳ ಒಲಿಂಪಿಕ್ಸ್‌ ಪದಕದ ಬರವನ್ನು ನೀಗಿಸಿದರು. ಸದ್ಯ ಒಂದು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 17ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಸೂರ್ಯನ ಆರ್ಭಟಕ್ಕೆ ಲಂಕಾ ದಹನ – ಭಾರತಕ್ಕೆ 43 ರನ್‌ಗಳ ಭರ್ಜರಿ ಗೆಲುವು; 1-0ರಲ್ಲಿ ಸರಣಿ ಮುನ್ನಡೆ 

Share This Article