ನಟ ದರ್ಶನ್ ಪ್ರಕರಣದ ಬಗ್ಗೆ ರವಿಚಂದ್ರನ್ (Ravichandran) ಪುತ್ರ ವಿಕ್ರಮ್ (Vikram) ಪ್ರತಿಕ್ರಿಯೆ ನೀಡಿದ್ದಾರೆ. ಕೇಸ್ ಕೋರ್ಟ್‌ನಲ್ಲಿದೆ, ತೀರ್ಪು ಬರಲಿ ಆಗ ಮಾತನಾಡೋಣ ಎಂದು ಮಾಧ್ಯಮಕ್ಕೆ ನಟ ವಿಕ್ರಮ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬ ನೋಡಿದ್ರೆ ಕರುಳು ಕಿತ್ತು ಬರುತ್ತದೆ: ವಿನೋದ್ ರಾಜ್
ನಾವಿನ್ನೂ ಈಗ ಚಿತ್ರರಂಗಕ್ಕೆ ಕಾಲಿಟ್ಟಿದ್ದೀವಿ. ಯಾರೆಲ್ಲಾ ಮಾತನಾಡಬೇಕು ಅವರೆಲ್ಲಾ ಮಾತಾಡ್ತಿದ್ದಾರೆ. ನಾನು ಅದರ ಬಗ್ಗೆ ಮಾತನಾಡಬಾರದು. ಈ ಪ್ರಕರಣ ಕೋರ್ಟ್‌ನಲ್ಲಿದೆ. ತೀರ್ಪು ಬರಲಿ ಆ ನಂತರ ಮಾತಾಡೋಣ ಎಂದಿದ್ದಾರೆ ವಿಕ್ರಮ್.
ದರ್ಶನ್ ಸರ್ ನಮಗೆ ವೃತ್ತಿಪರವಾಗಿ ಸದಾ ಬೆಂಬಲಿಸಿದ್ದಾರೆ. ನಮ್ಮ ಸಿನಿಮಾದ ಟೀಸರ್ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅವರ ವೈಯಕ್ತಿಕ ಬದುಕಿನ ಬಗ್ಗೆ ನಮಗೆ ಗೊತ್ತಿಲ್ಲ. ಇಂದಿಗೂ ಅವರ ಕುಟುಂಬದ ಜೊತೆ ನಮಗೆ ಉತ್ತಮ ಒಡನಾಟವಿದೆ. ಆದರೆ ಈ ಪ್ರಕರಣ ನಿಜಕ್ಕೂ ಏನು ಆಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದರಿಂದ ನಮ್ಮ ತಂದೆಗೂ ದುಃಖ ಆಗಿದೆ. ಈ ಪ್ರಕರಣದ ಬಗ್ಗೆ ಅಪ್ಪ ಏನೂ ಮಾತಾಡಿಲ್ಲ ಎಂದು ವಿಕ್ರಮ್ ಮಾತನಾಡಿದ್ದಾರೆ.