ಬೆಂಗಳೂರು: ಆಗಸ್ಟ್ 1 ರಿಂದ 7ನೇ ವೇತನ ಆಯೋಗದ (7th Pay Commission) ಶಿಫಾರಸ್ಸು ಜಾರಿಗೆ ಸರ್ಕಾರ (Karnataka Government) ತೀರ್ಮಾನಿಸಿದೆ.
ಮಾ.16 ರಂದು ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸಿಎಂ ಸಿದ್ದರಾಮಯ್ಯ (Siddaramaiah) ಸ್ವೀಕಾರ ಮಾಡಿದ್ದರು. ಬಳಿಕ ವೇತನ ಆಯೋಗದ ಶಿಫಾರಸು ಜಾರಿ ಬಗ್ಗೆ ಹಣಕಾಸು ಇಲಾಖೆಯಿಂದ ಹಣದ ಹೊಂದಾಣಿಕೆ ಕುರಿತು ಮಾಹಿತಿ ಕೇಳಲಾಗಿತ್ತು. ಇದೀಗ ಹಣಕಾಸು ಇಲಾಖೆಯ ವರದಿ ಬಳಿಕ ಸರ್ಕಾರ ತೀರ್ಮಾನ ಕೈಗೊಂಡಿದೆ. ಇದನ್ನೂ ಓದಿ: ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ವಿಜಯೇಂದ್ರ
ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನವನ್ನ ಸಂಪುಟ ಸಭೆಯಲ್ಲಿ ಸಿಎಂ ಪ್ರಕಟಿಸಿದ್ದಾರೆ. 27.5% ವೇತನ ಹೆಚ್ಚಳಕ್ಕೆ ಶಿಫಾರಸ್ಸು ವೇತನ ಆಯೋಗ ಶಿಫಾರಸು ಮಾಡಿತ್ತು. 27% ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ (ಜು.16) ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಈ ಬಗ್ಗೆ ಪ್ರಕಟ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಟಾಕಟ್ ಅಂತ ದಲಿತರ ಹಣ ಲೂಟಿಯಾಗಿದೆ, ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪು ಚುಕ್ಕೆ: ಗುಡುಗಿದ ಅಶೋಕ್