ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ -ಆಪರೇಷನ್ ಬಿಪಿಎಲ್ ಕಾರ್ಡ್‌ಗೆ ಪ್ಲಾನ್!

Public TV
2 Min Read
BPL APL Card

– ಅನರ್ಹ ಫಲಾನುಭವಿಗಳ ಪತ್ತೆಗೆ ಆಹಾರ ಇಲಾಖೆ ಸಜ್ಜು

ಬೆಂಗಳೂರು: ಗ್ಯಾರಂಟಿಗಳ (Congress Guarantee) ಆರ್ಥಿಕ ಭಾರದಿಂದ ಕುಸಿದಂತಿರುವ ರಾಜ್ಯ ಸರ್ಕಾರ ಈಗ ರಿಯಲ್ ಆಪರೇಷನ್‌ಗೆ ಕೈ ಹಾಕಿದಂತೆ ಕಾಣುತ್ತಿದೆ. ರಾಜ್ಯದ 80% ರಷ್ಟು ಜನರ ಬಳಿ ಬಿಪಿಎಲ್ ಕಾರ್ಡ್ (BPL Card) ಇದ್ದು ಕೂಡಲೇ ಅನರ್ಹರನ್ನು ಪತ್ತೆ ಹಚ್ಚಿ ಎಂದು ರಾಜ್ಯ ಸರ್ಕಾರ (Karnataka Government) ಆದೇಶ ಪ್ರಕಟಿಸಿದೆ.

ಈ ಬೆನ್ನಲ್ಲೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅನರ್ಹ ಫಲಾಭವಿಗಳನ್ನು ಪತ್ತೆ ಹಚ್ಚಲು ತಯಾರಿ ನಡೆಸಿದೆ. ಅಂದಾಜು 20 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗಬಹುದು ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಗೋಲ್ಮಾಲ್‌ಗೆ ಸ್ಪೋಟಕಆಡಿಯೋ ಸಾಕ್ಷ್ಯ – ನಾಗೇಂದ್ರ ಕಡೆಯವರಿಂದಲೇ ಅಕ್ರಮ ಆರೋಪ

karnataka minister siddaramaiah dk shivakumar

ರಾಜ್ಯದಲ್ಲಿ ಸದ್ಯದ 1.27 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು 4.36 ಕೋಟಿ ಮಂದಿ ಬಿಪಿಎಲ್ ಕಾರ್ಡ್ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಇದು ಸಾಲದೆಂಬಂತೆ ಹೊಸದಾಗಿ ಬಿಪಿಎಲ್ ಕಾರ್ಡ್‌ಗೆ 3 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಇದೀಗ ಅನರ್ಹ, ಅಕ್ರಮ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಾಲ್ಕು ಬೇರೆ ಇಲಾಖೆಗಳ ಸಹಕಾರ ಪಡೆಯಲು ಮುಂದಾಗಿದೆ. ಕಾರ್ಡ್‌ದಾರರ ಹೆಸರಲ್ಲಿ ವಾಹನ ಇವೆಯಾ ಎಂಬುದನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ, ಜಮೀನು ಎಷ್ಟಿದೆ ಎಂಬುದನ್ನು ತಿಳಿಯಲು ಕಂದಾಯ ಇಲಾಖೆ, ತೆರಿಗೆ ಪಾವತಿದಾರರಾ ಎಂಬುದನ್ನು ಪತ್ತೆ ಹಚ್ಚಲು ಐಟಿ ಇಲಾಖೆಯ ನೆರವು ಪಡೆಯಲು ಆಹಾರ ಇಲಾಖೆ ಸಜ್ಜಾಗುತ್ತಿದೆ. ಇದನ್ನೂ ಓದಿ: ಜೈಲಿನ ಊಟದಿಂದ ಫುಡ್ ಪಾಯಿಸನ್ ಆಗ್ತಿದೆ – ಮನೆ ಊಟ ಬೇಕೆಂದು ಹೈಕೋರ್ಟ್‌ಗೆ ದರ್ಶನ್ ಅರ್ಜಿ

anna bhagya free rice BPL Card 2

ಯಾರ ಕಾರ್ಡ್ ರದ್ದಾಗಬಹುದು?
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ಪ್ರತಿ ತಿಂಗಳು 150 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ, ವೈಟ್ ಬೋರ್ಡ್‌ 4 ಚಕ್ರದ ವಾಹನ ಇದ್ದು ಬಿಪಿಎಲ್‌ ಕಾರ್ಡ್‌ ಮಾಡಿಸಿದವರ ಕಾರ್ಡ್‌ ರದ್ದಾಗಲಿದೆ.

Share This Article