ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ – ದಿನೇಶ್ ಗುಂಡೂರಾವ್ ಹೇಳಿದ್ದೇನು?

Public TV
1 Min Read
Dinesh Gundu Rao

ಬೆಂಗಳೂರು: ಪಾನಿಪುರಿಗೆ (Panipuri) ಬಳಸುವ ರಾಸಾಯನಿಕಗಳ ಬ್ಯಾನ್ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸುಳಿವು ನೀಡಿದ್ದಾರೆ.

ಪಾನಿಪುರಿ ಸ್ಯಾಂಪಲ್ ಟೆಸ್ಟ್ ವರದಿ ಆರೋಗ್ಯ ಇಲಾಖೆ (Health dept) ಕೈ ಸೇರಿದ ಬೆನ್ನಲ್ಲೆ ಈ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಪಾನಿಪುರಿ ತಯಾರಿಸಲು ಬಳಸುವ ಕೃತಕ ಬಣ್ಣದಲ್ಲಿ ಸನ್ ಸೆಟ್ ಯೆಲ್ಲೊ, ರೋಡೋಮೈನ್ ಸೇರಿದಂತೆ ಐದು ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಸೋಮವಾರ ಈ ಬಗ್ಗೆ ಅಧಿಕೃತವಾಗಿ ಅವರು ಆದೇಶ ಪ್ರಕಟವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡಿ, ಆಗದೇ ಇದ್ದರೆ ಡಿಸಿಎಂ ಮಾಡಿ: ರಂಭಾಪುರಿ ಶ್ರೀ

ಗೋಬಿ, ಕಬಾಬ್, ಕಾಟನ್ ಕ್ಯಾಂಡಿ ಬಗ್ಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಪಾನಿಪೂರಿಗೆ ಬಳಸುವ ಕೆಮಿಕಲ್ ಬ್ಯಾನ್‍ಗೆ ಆದೇಶ ಮಾಡಲಾಗುತ್ತದೆ. ತಯಾರಕರು ಬ್ಯಾನ್ ಮಾಡಿದ ಮೇಲೂ ಬಳಕೆ ಮಾಡಬಾರದು. ಈ ಬಗ್ಗೆ ಜನರು ಕೂಡ ಎಚ್ಚರಿಕೆವಹಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಡಿಕೆಶಿಗೆ ಸಿಎಂ ಸ್ಥಾನದ ಬಗ್ಗೆ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ವಿಚಾರವಾಗಿ, ಯಾವ ಕಾರಣಕ್ಕೋ ಅವರು ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲ ಅಪ್ರಸ್ತುತ. ಸಿಎಂ ಅವರು ಇದ್ದಾಗ ಇಥರದ್ದೆಲ್ಲ ಚರ್ಚೆ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಹಾಲಿನ ದರದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ, ಹಾಲಿನ ಪ್ರಮಾಣ ಹೆಚ್ಚಳದಿಂದ ದರ ಹೆಚ್ಚಳ ಮಾಡಿದ್ದೇವೆ. ಹಾಲು ಚೆಲ್ಲುವ ಬದಲು ಜನರಿಗೆ ಕೊಡಲು, ರೈತರಿಗೆ ಅನುಕೂಲ ಆಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಚಾರವನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ಹೈನುಗಾರಿಕೆ ಬೆಳೆಯಬಾರದು, ರೈತರಿಗೆ ಒಳ್ಳೆಯದಾಗಬಾರದು ಎಂಬುದನ್ನು ಬಿಜೆಪಿಯವರ ಉದ್ದೇಶ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗೋಬಿ, ಕಾಟನ್‌ ಕ್ಯಾಂಡಿ ಆಯ್ತು.. ಈಗ ಚಿಕನ್‌, ಫಿಶ್‌ ಕಬಾಬ್‌ಗೆ ಕರ್ನಾಟಕ ಶಾಕ್‌!

Share This Article