ಲಾಯರ್ ಆಗಿ ಶಿವಣ್ಣ ಖಡಕ್ ಎಂಟ್ರಿ- ಮೇಕಿಂಗ್ ವಿಡಿಯೋ ಚಿಂದಿ ಎಂದ ಫ್ಯಾನ್ಸ್

Public TV
1 Min Read
Bhairathi Ranagal shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ ‘ಭೈರತಿ ರಣಗಲ್’ (Bhairathi Rangal) ಸಿನಿಮಾ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಸಖತ್ ಖಡಕ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಮೇಕಿಂಗ್ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

shivarajkumar

ಗೀತಾ ಪಿಕ್ಚರ್ಸ್ ಬ್ಯಾನರ್‌ನ ‘ಭೈರತಿ ರಣಗಲ್’ ಸಿನಿಮಾ ನಿರ್ಮಾಣವಾಗುತ್ತಿದೆ. ಗೀತಾ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿ ಶುಭಕೋರಿದೆ. ‘ಮಫ್ತಿ’ಗಿಂತ ಬಹಳ ಅದ್ಧೂರಿಯಾಗಿ ಪ್ರೀಕ್ವೆಲ್ ಬರಲಿದೆ. ಮಾಫಿಯಾ ಡಾನ್ ಭೈರತಿ ರಣಗಲ್ ಹಿನ್ನೆಲೆ ಏನು ಎನ್ನುವುದನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ:‘ಚೌಕಿದಾರ್’ ಅಡ್ಡಾಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ

ವಕೀಲನಾಗಿದ್ದ ಭೈರತಿ ರಣಗಲ್ ದೊಡ್ಡ ಡಾನ್ ಆಗಿ ಬದಲಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಚಿತ್ರಮಂದಿರದಲ್ಲೇ ಉತ್ತರ ಸಿಗಲಿದೆ. ನೂರಾರು ಜನ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಹಗಳಿರುಲು ಕೆಲಸ ಮಾಡುತ್ತಿದ್ದಾರೆ. ಇಲ್ಲೂ ಗಣಿ ಪ್ರದೇಶ, ಹೆಲಿಕ್ಯಾಪ್ಟರ್ ಶಾಟ್ಸ್ ಇದೆ. ಇನ್ನೂ ಪೊಲೀಸ್ ಠಾಣೆಯನ್ನೇ ರಣಗಲ್ ಸುಟ್ಟು ಬಿಡುವ ಸನ್ನಿವೇಶ ಕೂಡ ಚಿತ್ರದಲ್ಲಿರುವಂತೆ ಕಾಣುತ್ತಿದೆ. ಒಟ್ನಲ್ಲಿ ಈ ವಿಡಿಯೋ ನೋಡಿ ಫ್ಯಾನ್ಸ್ ಚಿಂದಿ ಆಗಿದೆ ಎಂದು ಹಾಡಿಹೊಗಳಿದ್ದಾರೆ.

ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ರುಕ್ಮಿಣಿ ವಸಂತ್ (Rukmini Vasanth) ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಬೋಸ್, ದೇವರಾಜ್, ಛಾಯಾ ಸಿಂಗ್, ಮಧು ಗುರುಸ್ವಾಮಿ, ವಸಿಷ್ಠ ಸಿಂಹ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಅಂದಹಾಗೆ, ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ.

Share This Article