ದರ್ಶನ್‌ಗೆ 40 ಲಕ್ಷ ಕೈ ಸಾಲ ಕೊಟ್ಟ ಮೋಹನ್‌ರಾಜ್‌ ನಾಪತ್ತೆ

Public TV
1 Min Read
Darshan 1 3

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ (Renuka Swamy Murder) ಮುಚ್ಚಿ ಹಾಕಲು ದರ್ಶನ್ (Darshan) ಏನೆಲ್ಲಾ ಮಾಡಲು ಯತ್ನಿಸಿದ್ದರು ಎಂಬ ಸ್ಪೋಟಕ ವಿಚಾರ ಬಯಲಾಗಿದೆ. ಮೊನ್ನೆಯಷ್ಟೇ ದರ್ಶನ್ ಮನೆಯಲ್ಲಿ 37 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಬಳಿಯಿಂದ 3 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿತ್ತು.

ಈ ಮೊತ್ತದ ಬೆನ್ನತ್ತಿದ್ದ ಪೊಲೀಸರಿಗೆ, ಶಾಸಕರೊಬ್ಬರ ಆಪ್ತನ ಲಿಂಕ್ ಪತ್ತೆಯಾಗಿದೆ. ತಮ್ಮ ಆಪ್ತ ಮೋಹನ್‌ರಾಜ್ (Mohan Raj) ಎನ್ನುವವರ ಬಳಿ ದರ್ಶನ್ 40 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಈ ಬೆನ್ನಲ್ಲೇ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

ವಿಚಾರಣೆ ಮುಂದಾಗುತ್ತಿದ್ದಂತೆ ಮೋಹನ್‌ರಾಜ್ ಮೊಬೈಲ್ ಸ್ವಿಚ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ದರ್ಶನ್‌ಗೆ ಈ ಹಣ ನೀಡುವಾಗ ಮೋಹನ್‌ರಾಜ್‌ಗೆ ಕೊಲೆ ವಿಚಾರ ಗೊತ್ತಾಗಿತ್ತಾ ಇಲ್ವಾ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.  ಒಂದೊಮ್ಮೆ ಕೊಲೆ ಪ್ರಕರಣ ಮೊದಲೇ ಗೊತ್ತಿತ್ತು ಎನ್ನುವುದಾದ್ರೆ ಮೋಹನ್‌ರಾಜ್‌ಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ದರ್ಶನ್ ಹಣದ ವಹಿವಾಟುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಐಟಿ ಇಲಾಖೆಗೆ ಪತ್ರ ಬರೆಯಲು ಚಿಂತನೆ ನಡೆಸಿದ್ದಾರೆ.

 

Share This Article