ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

Public TV
1 Min Read
Pavitra

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ A1 ಆರೋಪಿಯಾಗಿರುವ ಪವಿತ್ರಾ ಗೌಡ (Pavithra Gowda) ಅವರ ಮನೆಯಲ್ಲಿಂದು ಪೊಲೀಸರು (Bengaluru Police) ಸ್ಥಳ ಮಹಜರು ನಡೆಸಿದರು.

ವಿಧಿವಿಜ್ಞಾನ ಪ್ರಯೋಗಾಲಯ (FSL) ಅಧಿಕಾರಿಗಳ ತಂಡದೊಂದಿಗೆ ತೆರಳಿದ್ದ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಆರ್.ಆರ್ ನಗರದಲ್ಲಿರುವ ಪವಿತ್ರಾಗೌಡ ಅವರ ನಿವಾಸಕ್ಕೆ ಪವನ್ ಮತ್ತು ಪವಿತ್ರಾ ಇಬ್ಬರನ್ನು ಕರೆತಂದು ಸ್ಥಳ ಮಹಜರು ನಡೆಸಿದರು. ಮನೆಯ ಮೂಲೆ ಮೂಲೆಯನ್ನೂ ಜಾಲಾಡಿ ಸಾಕ್ಷ್ಯಗಳನ್ನೂ ಸಂಗ್ರಹಿಸಿದರು. ಇದನ್ನೂ ಓದಿ:  ದರ್ಶನ್‍ಗೆ ಮತ್ತಷ್ಟು ಸಂಕಷ್ಟ- ಸ್ವಾಮಿ ಹತ್ಯೆ ದಿನ ಧರಿಸಿದ್ದ ಬಟ್ಟೆ, ಶೂ ಸೀಜ್

Pavitra 2

ರೇಣುಕಾಸ್ವಾಮಿ ಕೊಲೆಯಾದ ದಿನ ಪವಿತ್ರಾಗೌಡ ಪಟ್ಟಣಗೆರೆ ಶೆಡ್‌ನಿಂದ ನೇರವಾಗಿ ತಮ್ಮ ನಿವಾಸಕ್ಕೆ ಬಂದಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆ ಶೆಡ್‌ಗೆ ಹೋದಾಗ ಅವರು ಯಾವ ಬಟ್ಟೆ ಧರಿಸಿದ್ದರು, ಚಪ್ಪಲಿ ಹಾಕಿದ್ದರು? ಎಂಬೆಲ್ಲಾ ಸಾಕ್ಷ್ಯಗಳ ಪರಿಶೀಲನೆ ನಡೆಸಲಾಯಿತು. ಜೊತೆಗೆ ಪವಿತ್ರಾಗೌಡ ನಿವಾಸದಲ್ಲಿದ್ದ ಸಿಸಿಟಿವಿ ಫೂಟೇಜ್‌ಗಳನ್ನ ಸಂಗ್ರಹಿಸಿದ ಪೊಲೀಸರು, ಪವಿತ್ರಾ ಓಡಾಡುತ್ತಿದ್ದ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳನ್ನೂ ತಪಾಸಣೆ ನಡೆಸಿದರು.

Pavitra 3

ಮೂರು ಹಂತದ ಡುಪ್ಲೆಕ್ಸ್ ಮನೆಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಲಾಯಿತು. ಪೊಲೀಸರು ಹಾಗೂ ಎಫ್‌ಎಸ್‌ಎಲ್ ಅಧಿಕಾರಿಗಳ ತಂಡ ಮನೆಯ ಇಂಚಿಂಚನ್ನೂ ತೀವ್ರವಾಗಿ ತಪಾಸಣೆ ನಡೆಸಿದರು. ಈ ವೇಳೆ ಮನೆಯ ಮುಂದೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: ಸೋಲಿನಿಂದಾಗಿ ಜನರ ಮೇಲೆ ಸರ್ಕಾರ ಸೇಡು; ಇಂಧನ ದರ ಇಳಿಸುವವರೆಗೂ ಬಿಜೆಪಿ ಹೋರಾಟ- ಆರ್.ಅಶೋಕ್

Share This Article