ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಅದೃಷ್ಟದ ಬಾಗಿಲು ತೆರೆದಿದೆ. ಬಿಟೌನ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಜೊತೆ ರಶ್ಮಿಕಾ ನಟಿಸೋದು ಕೂಡ ಪಕ್ಕಾ ಆಗಿದೆ. ‘ಸಿಖಂದರ್’ ಚಿತ್ರದ (Sikandar Film) ಶೂಟಿಂಗ್ ಯಾವಾಗ ಶುರುವಾಗಲಿದೆ ಎಂಬುದಕ್ಕೆ ಇದೀಗ ಉತ್ತರ ಕೂಡ ಸಿಕ್ಕಿದೆ.
ಸಿನಿಮಾ ಸಕ್ಸಸ್‌ಗಾಗಿ ಎದುರು ನೋಡ್ತಿರುವ ಸಲ್ಮಾನ್ ಖಾನ್ ಇದೀಗ ಕಾಲಿವುಡ್ ಸ್ಟಾರ್ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ
ಇದೇ ಜೂನ್ 18ರಿಂದ ಮುಂಬೈ ಸೇರಿದಂತೆ ಹಲವೆಡೆ ಚಿತ್ರದ ಶೂಟಿಂಗ್ ಶುರುವಾಗಲಿದೆ. ಸಲ್ಮಾನ್‌ಗಾಗಿ ನಿರ್ದೇಶಕ ಉತ್ತಮ ಕಥೆಯನ್ನೇ ಬರೆದಿದ್ದಾರೆ. ಸಲ್ಮಾನ್ ಮತ್ತು ರಶ್ಮಿಕಾ ಕೂಡ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ಅಂದಹಾಗೆ, ಕುಬೇರ, ಪುಷ್ಪ 2, ಅನಿಮಲ್ 2, ರೈನ್‌ಬೋ, ಗರ್ಲ್‌ಫ್ರೆಂಡ್ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.