ನಿದ್ರೆಗೆ ಜಾರಿದ ಚಾಲಕ, ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು – ಮೂವರ ದುರ್ಮರಣ!

Public TV
1 Min Read
Car Accident

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ (Gauribidanur Police Station) ನಗರಗೆರೆ ಬಳಿಯ‌ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ತಗ್ಗು ಪ್ರದೇಶಕ್ಕೆ ನುಗ್ಗಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗುರುವಾರ ತಡರಾತ್ರಿ ನಡೆದ ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ ಬೆಸ್ಕಾಂ ಶಾಖೆಯ ಲೈನ್‌‌ಮ್ಯಾನ್‌ಗಳಾದ (BESCOM Lineman) ಶ್ರೀಧರ್, ವೇಣು ಗೋಪಾಲ್, ಮಂಜುನಾಥ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸಾವಿನ ಕೂಪದಂತಿದ್ದ ಸಹಸ್ರತಾಲ್‌ ಹಿಮದ ಹೊದಿಕೆಯಿಂದ ಬದುಕುಳಿದವರು ಬೆಂಗಳೂರಿಗೆ ವಾಪಸ್‌

ಅಷ್ಟಕ್ಕೂ ಆಗಿದ್ದೇನು?
ಕಳೆದ ರಾತ್ರಿ ಗೌರಿಬಿದನೂರು ತಾಲ್ಲೂಕು ನಗರಗೆರೆ-ವಾಟದಹೊಸಹಳ್ಳಿ ರಸ್ತೆಯಲ್ಲಿ ವೇಣುಗೋಪಾಲ್ KA40-N-5668 ಬ್ರಿಜಾ ಕಾರಿನಲ್ಲಿ ಬರುವಾಗ, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಉರುಳಿದೆ. ಇದರಿಂದ ಶ್ರೀಧರ್ (28) ವೇಣುಗೋಪಾಲ (38), ಮಂಜುನಾಥ (37), ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಶಿವಕುಮಾರ್‌ ಎಂಬಾತ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Car Accident 3

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ ನಗರಗೆರೆ ಬಳಿ ತಿರುವು ಇರುವುದರಿಂದ ಮುಂಜಾನೆ ಸಮಯದಲ್ಲಿ ಚಾಲಕ ನಿದ್ರೆಗೆ ಜಾರಿದ್ದು ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಪಟ್ಟವರ ಶವಗಳನ್ನ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರಗೆ ರವಾನಿಸಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಫಿಕ್ಸ್ – ಟಿಕೆಟ್ ಪಡೆಯಲು ಯೋಗೇಶ್ವರ್ ಕಸರತ್ತು

Share This Article