ನಿಜ ಜೀವನದಲ್ಲೂ ಹೀರೋ ಆದ ನಿಖಿಲ್- ವರ್ಷಗಳಿಂದ ಮುಚ್ಚಿದ ದೇವಸ್ಥಾನ ತೆರೆಸಿದ ನಟ

Public TV
1 Min Read
nikhil siddarth

ಕಾರ್ತಿಕೇಯ, ಕಾರ್ತಿಕೇಯ 2 (Karthikeya 2) ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟ ನಿಖಿಲ್ ಸಿದ್ಧಾರ್ಥ್ (Nikhil Siddarth) ಇದೀಗ ಸಿನಿಮಾದಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿದ್ದಾರೆ. ಕೆಲ ವರ್ಷಗಳಿಂದ ಮುಚ್ಚಿದ ದೇವಸ್ಥಾನ (Temple) ನಿಖಿಲ್ ತೆರೆಸಿದ್ದಾರೆ.‌ ಅವರ ಕಾರ್ಯಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:‘ರಾಜಾ ರಾಣಿ’ ಶೋಗೆ ಎಂಟ್ರಿ ಕೊಟ್ಟ ವಿನಯ್ ಗೌಡ ದಂಪತಿ

Nikhil Siddharth 1

ಆಂಧ್ರ ಪ್ರದೇಶದ ಭಾಪಟ್ಲ ಜಿಲ್ಲೆಯ ಚಿರಾಲದ ಬಳಿಯಿರುವ ಈ ದೇವಸ್ಥಾನ ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನಿಖಿಲ್, ಭಕ್ತರಿಗಾಗಿ ದೇವಸ್ಥಾನದ ಬಾಗಿಲನ್ನ ಈಗ ಮತ್ತೆ ತೆರೆದಿದ್ದಾರೆ.

ಈ ಬಗ್ಗೆ ಸೋಷಿಯಲ್ ವಿಡಿಯೋ ಹಂಚಿಕೊಂಡಿರುವ ನಿಖಿಲ್, ಊರಿನ ಗ್ರಾಮಸ್ಥರಿಗೆ ಶಿಕ್ಷೆಯಾಗಿ ಊರಿನ ದೇವಾಲಯವನ್ನು ಮುಚ್ಚಲಾಗಿತ್ತು. ನಾವು ಕಳೆದ ತಿಂಗಳು ದೇವಾಲಯ ತೆರೆದು ಜೀರ್ಣೋದ್ಧಾರ ಮಾಡಿದೆವು. ಈಗ ಮತ್ತೆ ಅಲ್ಲಿಗೆ ಭೇಟಿ ನೀಡಿದಾಗ ಗ್ರಾಮಸ್ಥರ ಸಂಭ್ರಮ ನೋಡಿ ಖುಷಿಯಾಯ್ತು ಎಂದಿದ್ದಾರೆ. ನಿಖಿಲ್ ನಡೆಯುತ್ತಿರುವಾಗ ಗ್ರಾಮದ ಮಹಿಳೆಯರು ಹಾದಿಗೆ ಹೂವು ಹಾಸಿ ಸ್ವಾಗತ ಕೋರುತ್ತಿರುವ ದೃಶ್ಯವಿದೆ.

ಸದ್ಯ ಕನ್ನಡದ ನಟಿ ನಭಾ ನಟೇಶ್ (Nabha Natesh) ಜೊತೆ ‘ಸ್ವಯಂಭು’ ಸಿನಿಮಾದಲ್ಲಿ ನಿಖಿಲ್ ನಾಯಕನಾಗಿ ನಟಿಸುತ್ತಿದ್ದಾರೆ. ಇಂಡಿಯನ್ ಹೌಸ್ ಎಂಬ ಹೊಸ ಸಿನಿಮಾವನ್ನು ನಟ ಒಪ್ಪಿಕೊಂಡಿದ್ದಾರೆ.

Share This Article