RCB vs CSK ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ – ಸಿಎಂಗೆ ಸಚಿವರ ಸಾಥ್‌

Public TV
1 Min Read
siddaramaiah RCB vs CSK

– ಕ್ರೀಡಾಂಗಣದಲ್ಲಿ ಸಿಎಂ ಭೇಟಿಯಾದ ನಟ ಶಿವಣ್ಣ

ಬೆಂಗಳೂರು: ರಾಜಕೀಯ ಒತ್ತಡಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್‌ಸಿಬಿ ವರ್ಸಸ್‌ ಸಿಎಸ್‌ಕೆ (RCB vs CSK) ಪಂದ್ಯವನ್ನು ವೀಕ್ಷಿಸಿದರು.‌

siddaramaiah RCB vs CSK 2

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಾ.ಪರಮೇಶ್ವರ್‌, ಡಾ. ಹೆಚ್‌.ಸಿ.ಮಹದೇವಪ್ಪ ಅವರು ಸಹ ಸಿಎಂ ಜೊತೆ ಪಂದ್ಯ ವೀಕ್ಷಿಸಿದರು. ಈ ವೇಳೆ ಅಲ್ಲೇ ಇದ್ದ ನಟ ಶಿವರಾಜ್‌ಕುಮಾರ್‌ ಸಿಎಂ ಭೇಟಿಯಾದರು. ಸಿದ್ದರಾಮಯ್ಯ ಕಡೆ ಬಂದ ಶಿವಣ್ಣ, ಸಿಎಂ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಇದನ್ನೂ ಓದಿ: ಬಿಡುವು ಕೊಟ್ಟ ವರುಣ – RCB vs CSK ನಾಕೌಟ್‌ ಕದನ ಪುನಾರಂಭ; ಅಭಿಮಾನಿಗಳಲ್ಲಿ ಚಿಗುರಿದ ಉತ್ಸಾಹ

siddaramaiah RCB vs CSK 1

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs CSK) ತಂಡಗಳು ನಾಕೌಟ್‌ ಕದನ ನಡೆಸುತ್ತಿವೆ. ಟಾಸ್‌ ಸೋತು ಕ್ರೀಸ್‌ಗಿಳಿದಿರುವ ಆರ್‌ಸಿಬಿ ಉತ್ತಮ ಆರಂಭವನ್ನೇ ಪಡೆದುಕೊಂಡಿದೆ.

14 ಓವರ್‌ ಪೂರೈಸಿರುವ ಆರ್‌ಸಿಬಿ 2 ವಿಕೆಟ್‌ ನಷ್ಟಕ್ಕೆ 132 ರನ್‌ಗಳಿಸಿದೆ. ವಿರಾಟ್‌ ಕೊಹ್ಲಿ 47 ರನ್‌ ಸಿಡಿಸಿ ಕ್ಯಾಚ್‌ ನೀಡಿ ಔಟಾಗಿದ್ದಾರೆ. ಡು ಪ್ಲೆಸಿಸ್‌ ಅರ್ಧಶತಕ ಬಾರಿಸಿದ್ದಾರೆ. ಪಾಟಿದಾರ್‌, ಗ್ರೀನ್‌ ಆಟ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿಂದು RCB vs CSK ಹೈವೋಲ್ಟೇಜ್ ಪಂದ್ಯ – ಚಿನ್ನಸ್ವಾಮಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

Share This Article