ನಟಿ ರಾಖಿಗೆ ಗರ್ಭಾಶಯ ತೊಂದರೆ: ನಾಳೆ ಶಸ್ತ್ರ ಚಿಕಿತ್ಸೆ

Public TV
1 Min Read
rakhi sawant 3

ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ (Rakhi Sawant) ಮೊನ್ನೆಯಷ್ಟೇ ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದರೂ, ನಾನಾ ರೀತಿಯಲ್ಲಿ ರಾಖಿ ಬಗ್ಗೆ ಕಾಮೆಂಟ್‍ಗಳು ಕೇಳಿ ಬಂದಿದ್ದವು. ಅದು ಡ್ರಾಮಾ ಎಂದು ಹೇಳಲಾಗಿತ್ತು. ಆದರೆ, ರಾಖಿ ಗರ್ಭಾಶಯ ತೊಂದರೆಯಿಂದ ಬಳಲುತ್ತಿದ್ದಾರಂತೆ. ನಾಳೆ ಶಸ್ತ್ರ ಚಿಕಿತ್ಸೆಗೆ (Surgery) ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.

RAKHI SAWANT 1

ನಟಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆಕೆ ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

rakhi sawant 2

ರಾಖಿ ಸಾವಂತ್ ಅವರ ಈ ಫೋಟೋಗಳನ್ನು ನೋಡಿದರೆ ಆಕೆಗೆ ಪ್ರಜ್ಞೆ ಇಲ್ಲದೇ ಮಲಗಿದ್ದಾರಾ ಅಥವಾ ಗಾಢ ನಿದ್ರೆಯಲ್ಲಿದ್ದಾರೋ ಎಂಬುದು ತಿಳಿದಿರಲಿಲ್ಲ. ಫೋಟೋದಲ್ಲಿ ನರ್ಸ್ ಬಿಪಿ ಪರೀಕ್ಷಿಸುತ್ತಿರುವುದನ್ನು ಕಾಣಬಹುದಾಗಿತ್ತು. ಹಿಂಭಾಗದಲ್ಲಿ ದೊಡ್ಡ ಇಸಿಜಿ ಯಂತ್ರವನ್ನೂ ಅಳವಡಿಸಲಾಗಿತ್ತು.

 

ಈ ಕುರಿತಂತೆ ಆದಿಲ್ ಮಾತನಾಡಿದ್ದು, ಬಂಧನ ಭೀತಿಯಲ್ಲಿರುವ ರಾಖಿ ಡ್ರಾಮಾ ಮಾಡುತ್ತಿದ್ದಾಳೆ. ಜೈಲಿಗೆ ಹೋಗೋದನ್ನು ತಪ್ಪಿಸಲು ಆಸ್ಪತ್ರೆಯಲ್ಲಿ ಮಲಗಿದ್ದಾಳೆ ಎಂದು ಆರೋಪ ಮಾಡಿದ್ದರು.

Share This Article