Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 2004: ಎನ್‌ಡಿಎ ಔಟ್‌.. ಯುಪಿಎ ಇನ್‌ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Election News | 2004: ಎನ್‌ಡಿಎ ಔಟ್‌.. ಯುಪಿಎ ಇನ್‌ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ

Election News

2004: ಎನ್‌ಡಿಎ ಔಟ್‌.. ಯುಪಿಎ ಇನ್‌ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ

Public TV
Last updated: May 16, 2024 6:49 pm
Public TV
Share
5 Min Read
Lok Sabha Elections 2004
SHARE

– ಕರ್ನಾಟಕದಲ್ಲಿ ಬಿಜೆಪಿ ದಾಖಲೆಯ ಸಾಧನೆ
– ಮೊದಲ ಚುನಾವಣೆ ಕಂಡ ಜಾರ್ಖಂಡ್‌, ಉತ್ತರಾಂಚಲ, ಛತ್ತೀಸಗಢ

ಪಬ್ಲಿಕ್‌ ಟಿವಿ ವಿಶೇಷ
1999-2004 ರ ವರೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನೇತೃತ್ವದಲ್ಲಿ ದೇಶವು ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಭದ್ರತೆಯನ್ನು ಕಂಡಿತ್ತು. ಅದಕ್ಕಿಂತ ಮುಖ್ಯವಾಗಿ ಇದರ ಹಿಂದಿನ ಮೂರು ಚುನಾವಣೆಗಳ ನಂತರ ಭಾರತವು ರಾಜಕೀಯ ಸ್ಥಿರತೆಗೆ ಸಾಕ್ಷಿಯಾಯಿತು. 2004 ರಲ್ಲಿ ವಾಜಪೇಯಿ ವರ್ಷಗಳು ತೆರೆಗೆ ಬಂದವು. ಆಡಳಿತಾರೂಢ ಬಿಜೆಪಿಯು ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನಪ್ರಿಯತೆ ಮತ್ತು ಸರ್ಕಾರದ ಆಡಳಿತವನ್ನು ಮುಂದಿಟ್ಟುಕೊಂಡು ಮತ್ತೊಂದು ಸಾರ್ವತ್ರಿಕ ಚುನಾವಣೆ ಗೆಲುವಿನ ವಿಶ್ವಾಸದೊಂದಿಗೆ ಮುನ್ನಡೆಯಿತು. ಮೆಗಾ ‘ಇಂಡಿಯಾ ಶೈನಿಂಗ್’ ಅಭಿಯಾನದ ಮೂಲಕ ಆರ್ಥಿಕ ಸಾಧನೆ ಮತ್ತು ಜನಸಾಮಾನ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಭರವಸೆಯೊಂದಿಗೆ ಚುನಾವಣೆಗೆ ಧುಮುಕಿತು. ಆಗಿನ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿನ ಭವಿಷ್ಯವನ್ನೇ ನುಡಿದಿದ್ದವು. ಆದರೆ ಅಂತಿಮ ತೀರ್ಪು ಬೇರೆಯದೇ ಆಯಿತು. ಚುನಾವಣಾ ಲೆಕ್ಕಾಚಾರ ತಲೆಕೆಳಗಾಯಿತು.

ಯುನೈಟೆಡ್‌ ಪ್ರೋಗ್ರೆಸ್ಸಿವ್‌ ಅಲಯನ್ಸ್‌ ಉದಯ
2004 ಕ್ಕೂ ಹಿಂದೆ ಭಾರತದ ಹಳೆಯ ಪಕ್ಷವಾಗಿ ಐಎನ್‌ಸಿ ಹಲವು ದಶಕಗಳ ಕಾಲ ಆಡಳಿತ ನಡೆಸಿತ್ತು. ನಂತರ ಬದಲಾದ ರಾಜಕೀಯ ಪರಿಸ್ಥಿತಿಗಳನ್ನು ನಿಭಾಯಿಸಲು ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಮೈತ್ರಿಕೂಟ ರಚಿಸಿತು. ಆಗಾಗಲೇ ಭಾರತದಲ್ಲಿ ಭದ್ರಬುನಾದಿ ಹಾಕಿದ್ದ ಎನ್‌ಡಿಎಗೆ ಪ್ರತಿಸ್ಪರ್ಧಿಯಾಗಿ ಪರ್ಯಾಯ ಇರಬೇಕು ಎಂಬ ಆಶಯದೊಂದಿಗೆ 2004 ರಲ್ಲಿ ಯುಪಿಎ (UPA) ಹುಟ್ಟುಕೊಂಡಿತು. ಇದನ್ನೂ ಓದಿ: 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ

manmohan singh sonia gandhi rahul gandhi

ಅಸ್ಥಿರ ನಾಯಕತ್ವ, ಆಂತರಿಕ ಭಿನ್ನಾಭಿಪ್ರಾಯ ಮತ್ತು ಕಲಹದಿಂದ ದುರ್ಬಲವಾಗಿದ್ದ ಕಾಂಗ್ರೆಸ್ ಮತ್ತೆ ಪ್ರಾಬಲ್ಯ ಸಾಧಿಸಲು ಮುಂದಾಯಿತು. ಸೋನಿಯಾ ಗಾಂಧಿ ಅವರು ಪಕ್ಷದೊಳಗೆ ತಮ್ಮ ಪ್ರಾಬಲ್ಯದ ಮುದ್ರೆಯೊತ್ತಿದ್ದರು. ಆದರೂ ಭಾರತೀಯ ಮತದಾರರ ಮನಸ್ಸು ಮತ್ತು ಹೃದಯದಲ್ಲಿ ಸೋನಿಯಾ ನೇತೃತ್ವದ ಕಾಂಗ್ರೆಸ್‌ಗೆ ಯಾವ ಸ್ಥಾನ ಸಿಗಬಹುದು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿತ್ತು. ಈ ಹೊತ್ತಿನಲ್ಲಿ ಅವರು ಕೈಗೊಂಡ ನಿರ್ಧಾರ ದೇಶದ ಗಮನ ಸೆಳೆಯಿತು. ಗಾಂಧಿಯೇತರ ನಾಯಕರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಿ ಅಚ್ಚರಿ ಮೂಡಿಸಿದ್ದರು.

ಈ ಐದು ವರ್ಷಗಳು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಅನಿಶ್ಚಿತ ಸಮಯವಾಗಿತ್ತು. ಕಾರ್ಗಿಲ್ ಸಂಘರ್ಷದ ನಂತರ ಭಾರತ-ಪಾಕಿಸ್ತಾನ ಸಂಬಂಧಗಳು ಉದ್ವಿಗ್ನವಾಗಿದ್ದವು. ಆದರೆ ವಾಜಪೇಯಿ ಅವರು ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿಗೆ ಆದ್ಯತೆ ನೀಡಿದರು. ರಾಷ್ಟ್ರೀಯ ಭದ್ರತೆಯು ಪ್ರಮುಖವಾಗಿ ಉಳಿದಿದ್ದರೂ, ಭಯೋತ್ಪಾದನೆಯ ಬೆದರಿಕೆಗಳ ಹೊರತಾಗಿಯೂ ಭಾರತವು ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿತು. 2001 ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ 9/11 ದಾಳಿಯು ವಿಶ್ವದಾದ್ಯಂತ ದೇಶಗಳಿಗೆ ಒಂದು ತಿರುವು ನೀಡಿತು. ಯುಎಸ್ ಅಲ್ ಖೈದಾ ವಿರುದ್ಧ ಹೆಚ್ಚು ಆಕ್ರಮಣಕಾರಿ ರೀತಿಯಲ್ಲಿ ಹೊರಬಂದಿತು. ಅದು ಜಾಗತಿಕ ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ಆಳವಾದ ಪರಿಣಾಮ ಬೀರಿತು. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ

9 11 US

3 ಹೊಸ ರಾಜ್ಯಗಳ ಹುಟ್ಟು
2004 ರ ಲೋಕಸಭಾ ಚುನಾವಣೆಯನ್ನು (Lok Sabha Elections 2004) ಭಾರತದಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಯಿತು. ಬಿಹಾರದಿಂದ ಜಾರ್ಖಂಡ್, ಹಿಮಾಚಲ ಪ್ರದೇಶದಿಂದ ಉತ್ತರಾಂಚಲ (ಈಗ ಉತ್ತರಾಖಂಡ) ಮತ್ತು ಮಧ್ಯಪ್ರದೇಶದಿಂದ ಛತ್ತೀಸಗಢ 2000 ರಲ್ಲಿ ಪ್ರತ್ಯೇಕ ರಾಜ್ಯಗಳಾಗಿ ರೂಪುಗೊಂಡವು.

35 ರಾಜ್ಯ, 21 ದಿನದ ಚುನಾವಣೆ
ಭಾರತದ 14ನೇ ಸಾರ್ವತ್ರಿಕ ಚುನಾವಣೆಯು ಏ.20 ರಿಂದ ಮೇ 10 ರ ವರೆಗೆ ನಡೆಯಿತು. 35 ರಾಜ್ಯಗಳಿಗೆ 21 ದಿನಗಳ ಕಾಲ ಮತದಾನ ನಡೆಯಿತು.

6 ರಾಷ್ಟ್ರೀಯ ಹಾಗೂ 31 ಪ್ರಾದೇಶಿಕ ಪಕ್ಷಗಳು ಸೇರಿ ಒಟ್ಟು 230 ಪಕ್ಷಗಳು ಸ್ಪರ್ಧೆ ಮಾಡಿದ್ದವು. 543 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಇದನ್ನೂ ಓದಿ: 1996: ವಾಜಪೇಯಿ ಪ್ರಧಾನಿಯಾಗಿದ್ದು ಕೇವಲ 16 ದಿನ, ನಂತರ ಬಂದ್ರು ದೇವೇಗೌಡ್ರು!

abvajpayee kus 1

ಒಟ್ಟು ಮತದಾರರು: 67,14,87,930
ಪುರುಷರು: 34,94,90,864
ಮಹಿಳೆಯರು: 32,19,97,066

ಮತದಾನ: 38,99,48,330 ಮಂದಿ
ವೋಟಿಂಗ್ ಪ್ರಮಾಣ: 58.07%

ಒಟ್ಟು ಅಭ್ಯರ್ಥಿಗಳು: 5,435
ಮಹಿಳಾ ಅಭ್ಯರ್ಥಿಗಳು: 355 (ಗೆಲುವು 45)

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ – 145
ಬಿಜೆಪಿ – 138
ಸಿಪಿಎಂ – 43
ಬಿಎಸ್‌ಪಿ – 19
ಸಿಪಿಐ – 10
ಎನ್‌ಸಿಪಿ – 9
ಪಕ್ಷೇತರ – 5
ಇತರೆ – 174

ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿಗೆ ಶಾಕ್
ಚುನಾವಣೆಯ ಫಲಿತಾಂಶ ಬಿಜೆಪಿಗೆ ಆಘಾತ ನೀಡಿತು. ಸುಲಭ ಜಯಭೇರಿ ಬಾರಿಸುವ ವಿಶ್ವಾಸವಿದ್ದರೂ ಪಕ್ಷವು ತನ್ನ ಸ್ವಂತ ಅರ್ಹತೆಯ ಮೇಲೆ ಕೇವಲ 138 ಸ್ಥಾನಗಳನ್ನು ಗೆದ್ದಿತು. ಈ ಮೂಲಕ 44 ಸ್ಥಾನಗಳ ಕುಸಿತ ಕಂಡಿತು. ಎನ್‌ಡಿಎ ಬಹುಮತಕ್ಕೆ ಸ್ವಲ್ಪ ದೂರದಲ್ಲಿ ಕುಸಿದಿತ್ತು. ಕೇವಲ 181 ಸ್ಥಾನಗಳಲ್ಲಿ ಮೈತ್ರಿಕೂಟ ಗೆಲುವು ಸಾಧಿಸಿತು. ಅದರ ಕೆಲವು ಪ್ರಮುಖ ಮಿತ್ರಪಕ್ಷಗಳು ಸಹ ಪ್ರಭಾವ ಬೀರಲು ವಿಫಲವಾದವು.

manmohan singh

‌ಮತ್ತೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್
ಕಾಂಗ್ರೆಸ್ ಕಳೆದ ಚುನಾವಣೆಗೆ ಹೋಲಿಸಿದರೆ 31 ಸ್ಥಾನಗಳನ್ನು ಹೆಚ್ಚಿಸಿಕೊಂಡು 145 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಅವಧಿಯಲ್ಲಿನ ಪ್ರದರ್ಶನಗಳಿಗೆ ಹೋಲಿಸಿದರೆ ಇದು ಯಾವುದೇ ರೀತಿಯಲ್ಲೂ ಅತ್ಯುತ್ತಮ ಚುನಾವಣಾ ಕಾರ್ಯಕ್ಷಮತೆಯ ಪ್ರದರ್ಶನವಾಗಿರಲಿಲ್ಲ. ಚುನಾವಣೆಯ ನಂತರ ಇತರ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಸ್ಥಾಪಿಸಿದ್ದು ಕಾಂಗ್ರೆಸ್‌ನ ಬುದ್ದಿವಂತಿಕೆ ನಡೆ ಎಂದು ವಿಶ್ಲೇಷಿಸಲಾಗಿದೆ. ಯುಪಿಎ ಒಟ್ಟು 218 ಸ್ಥಾನಗಳನ್ನು ಗಳಿಸಿತು. ಅದು ಎನ್‌ಡಿಎ ಸಂಖ್ಯಾಬಲಕ್ಕಿಂತ ಹೆಚ್ಚಿದ್ದರೂ, ಬಹುಮತ ಸಾಧ್ಯವಾಗಲಿಲ್ಲ. ಇದನ್ನೂ ಓದಿ: 1989: ಯಾವ ಪಕ್ಷಕ್ಕೂ ಬಹುಮತ ನೀಡದ ಭಾರತದ ಜನ

ಯುಪಿಎ ಮೈತ್ರಿಕೂಟ ಸರ್ಕಾರ ರಚನೆ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಸಿಪಿಐ-ಮಾರ್ಕ್ಸ್‌ವಾದಿ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಮತ್ತು ಆಲ್-ಇಂಡಿಯಾ ಫಾರ್ವರ್ಡ್ ಬ್ಲಾಕ್‌ಗಳನ್ನು ಒಳಗೊಂಡಿರುವ ಎಡರಂಗದ ಹೊರಗಿನ ಬೆಂಬಲವು ಒಟ್ಟಾಗಿ 59 ಸ್ಥಾನಗಳನ್ನು ನೀಡಿತು. ಸ್ವತಂತ್ರರ ಸಹಾಯದಿಂದ ಮತ್ತು ಬಹುಜನ ಸಮಾಜ ಪಕ್ಷ (19 ಸ್ಥಾನಗಳು), ಸಮಾಜವಾದಿ ಪಕ್ಷ (36 ಸ್ಥಾನಗಳು) ಮತ್ತು ಕೇರಳ ಕಾಂಗ್ರೆಸ್ (1 ಸ್ಥಾನ) ಹೊರಗಿನ ಬೆಂಬಲದೊಂದಿಗೆ ಯುಪಿಎ ಸರ್ಕಾರ ರಚನೆಗೆ ಹಕ್ಕು ಸಾಧಿಸಲು 335 ರ ಮ್ಯಾಜಿಕ್ ಮಾರ್ಕ್ ಬಂತು. ಕಾಂಗ್ರೆಸ್ ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯಾಗಿ ಸ್ವಾಗತಿಸಲು ಸಜ್ಜಾಗಿತ್ತು. ಆದರೆ ಪ್ರಧಾನಿ ಹುದ್ದೆಯನ್ನು ಸೋನಿಯಾ ಅವರು ನಿರಾಕರಿಸುತ್ತಾರೆ.

ಮನಮೋಹನ್ ಸಿಂಗ್ 14ನೇ ಪ್ರಧಾನಿ
ಅರ್ಥಶಾಸ್ತ್ರಜ್ಞ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿ ಅಪಾರ ಅನುಭವ ಹೊಂದಿದ್ದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ದೇಶದ 14ನೇ ಪ್ರಧಾನಿಯಾಗಿ ಹಲವಾರು ಆರ್ಥಿಕ ಸುಧಾರಣೆಗಳಿಗೆ ಕಾರಣರಾಗುತ್ತಾರೆ.

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸಾಧನೆ
1999 ರ ಚುನಾವಣೆಯಲ್ಲಿ ಕೇವಲ 7 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2004 ರಲ್ಲಿ ಎರಡಂಕಿಗೆ ಜಿಗಿದು ಸಾಧನೆ ಮಾಡಿತು. 28 ರ ಪೈಕಿ 18 ಕ್ಷೇತ್ರಗಳನ್ನು ದಾಖಲೆಯ ಜಯ ಸಾಧಿಸಿತು. ಕಾಂಗ್ರೆಸ್‌ 8 ಮತ್ತು ಜೆಡಿಎಸ್‌ 2 ಸ್ಥಾನಗಳನ್ನು ಮಾತ್ರ ಗೆದ್ದವು.

TAGGED:Atal Bihari VajpayeeDr Manmohan SinghLok Sabha Elections 2004Lok Sabha elections 2024ndaSonia Gandhiupaಅಟಲ್ ಬಿಹಾರಿ ವಾಜಪೇಯಿಎನ್‍ಡಿಎಯುಪಿಎಸೋನಿಯಾ ಗಾಂಧಿ
Share This Article
Facebook Whatsapp Whatsapp Telegram

Cinema news

Pavithra Gowda 1
ಪವಿತ್ರಗೌಡಗೆ ಮನೆ ಊಟ ನಿರಾಕರಿಸಿದ್ದು ಒಳ್ಳೆಯದು – ಅಲೋಕ್ ಕುಮಾರ್
Cinema Districts Karnataka Latest Sandalwood Shivamogga States Top Stories
CM Siddaramaiah congratulates Gilli Nata on winning Kannada Bigg Boss
ಬಿಗ್‌ಬಾಸ್‌ ಗೆದ್ದ ಗಿಲ್ಲಿಯನ್ನು ಅಭಿನಂದಿಸಿದ ಸಿಎಂ
Bengaluru City Cinema Districts Karnataka Latest Top Stories TV Shows
Payal Changappa
ʻಅಮೃತ ಅಂಜನ್‌ʼ ಸಿನಿಮಾದ ಫೀಲಿಂಗ್‌ ಸಾಂಗ್‌ ರಿಲೀಸ್‌
Cinema Latest Sandalwood
Life Ellind Ellige
`ಲೈಫ್ ಎಲ್ಲಿಂದ ಎಲ್ಲಿಗೆ’ ಅಂತ ಹಾಡಿದ ಟೀಮ್
Cinema Latest Sandalwood Top Stories

You Might Also Like

siddaramaiah vs Thawar Chand Gehlot
Bengaluru City

ಚುಟುಕು ಭಾಷಣಗೈದು ಜಾಣತನ ಮೆರೆದ ಗೆಹ್ಲೋಟ್‌! – ಇಂದು ಸದನದಲ್ಲಿ ಏನಾಯ್ತು?

Public TV
By Public TV
4 minutes ago
Vidhana Soudha
Bengaluru City

ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ; ಸಂಪುಟ ಒಪ್ಪಿಗೆ

Public TV
By Public TV
40 minutes ago
ICC T20 World Cup
Cricket

ಭಾರತಕ್ಕೆ ಬಾಂಗ್ಲಾ ತಂಡ ಹೋಗಲ್ಲ – ಐಸಿಸಿಗೆ ಬಾಂಗ್ಲಾ ಉತ್ತರ

Public TV
By Public TV
55 minutes ago
Andhra Pradesh Wife Kills Husband And Watches Porn Video
Crime

ಲವ್ವರ್ ಜೊತೆ ಸೇರಿ ಪತಿಯ ಹತ್ಯೆ – ಶವದ ಪಕ್ಕದಲ್ಲೇ ಪೋರ್ನ್ ವೀಡಿಯೋ ವೀಕ್ಷಿಸುತ್ತಾ ರಾತ್ರಿ ಕಳೆದ ಪತ್ನಿ

Public TV
By Public TV
59 minutes ago
jammu kashmir 10 soldiers killed
Latest

ಜಮ್ಮು-ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; 10 ಯೋಧರು ಹುತಾತ್ಮ

Public TV
By Public TV
1 hour ago
tree karwar
Latest

ಕಾರವಾರ| ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಮರಕ್ಕೆ ಕೊಡಲಿ ಏಟು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?