ದುಬೈ: ಇಲ್ಲಿ ಪ್ರವಾಸಿಗರೊಬ್ಬರ ಕಳೆದುಹೋದ ವಾಚ್ ಅನ್ನು ಅಧಿಕಾರಿಗಳಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಭಾರತೀಯ ಹುಡುಗನನ್ನು ಪ್ರಶಂಸಿಸಿ ಪ್ರಮಾಣ ಪತ್ರ ನೀಡಲಾಗಿದೆ.
ಮುಹಮ್ಮದ್ ಅಯಾನ್ ಯೂನಿಸ್ ತನ್ನ ತಂದೆಯೊಂದಿಗೆ ಪ್ರವಾಸದಲ್ಲಿದ್ದ. ಈ ವೇಳೆ ಆತನಿಗೆ ವಾಚ್‌ವೊಂದು ಸಿಕ್ಕಿದೆ. ತೆಗೆದುಕೊಂಡು ದುಬೈ (Dubai) ಪೊಲೀಸರಿಗೆ ಹುಡುಗ ನೀಡಿದ್ದಾನೆ. ಅಲ್ಲದೇ ಸಂಬಂಧಪಟ್ಟ ಮಾಲೀಕರಿಗೆ ಹಿಂದಿರುಗಿಸುವಂತೆ ತಿಳಿಸಿದ್ದ. ಅದರಂತೆ ಪೊಲೀಸರು ಯಶಸ್ವಿಯಾಗಿ ವಾಚ್‌ನ್ನು ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಹುಡುಗನ ಪ್ರಾಮಾಣಿಕತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ಲೋವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್‌ಗೆ ಗುಂಡೇಟು
#News | Dubai Police Honours Child for Honesty After Returning Tourist’s Lost Watch
Details:https://t.co/6dFnBky55r#YourSecurityOurHappiness#SmartSecureTogether pic.twitter.com/bVccqxabP5
— Dubai Policeشرطة دبي (@DubaiPoliceHQ) May 12, 2024
ದುಬೈ ಟೂರಿಸ್ಟ್ ಪೋಲೀಸ್ ಇಲಾಖೆಯು ಹುಡುಗನ ಪ್ರಾಮಾಣಿಕತೆಯನ್ನು ಗೌರವಿಸಿ ಪ್ರಮಾಣಪತ್ರವನ್ನು ನೀಡಿತು. ದುಬೈ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಹಮ್ಮದ್ ಅಯಾನ್ ಯೂನಿಸ್ ಭಾವಚಿತ್ರದೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಪ್ರವಾಸಿ ಪೊಲೀಸ್ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಖಾಲ್ಫಾನ್ ಒಬೇದ್ ಅಲ್ ಜಲ್ಲಾಫ್, ಉಪ ಲೆಫ್ಟಿನೆಂಟ್ ಕರ್ನಲ್ ಮುಹಮ್ಮದ್ ಅಬ್ದುಲ್ ರಹಮಾನ್ ಮತ್ತು ಕ್ಯಾಪ್ಟನ್ ಶಹಾಬ್ ಅಲ್ ಸಾದಿ ಅವರು ಬಾಲಕನಿಗೆ ಪ್ರಮಾಣಪತ್ರವನ್ನು ನೀಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್ ಅಲರ್ಟ್’; ಹವಾಮಾನ ತಜ್ಞರ ಆತಂಕ!