ಪ್ರೇಮಲೋಕ 2: ಅಂದು ಜೂಹಿ, ಇಂದು ತಮಿಳಿನ ತೇಜು

Public TV
2 Min Read
Teju Ashwini 1

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೊಂದು ಪ್ರೇಮಲೋಕ ಹಾಡಲು ಸಜ್ಜಾಗಿರುವ ವಿಷಯ ಗೊತ್ತೇ ಇದೆ. ಮೊದಲ ಪ್ರೇಮಲೋಕಕ್ಕೆ ರವಿಮಾಮ ಬಾಲಿವುಡ್ ನಿಂದ ಜೂಹಿ ಚಾವ್ಲಾ ಅವರನ್ನು ಕರೆತಂದಿದ್ದರು. ಪ್ರೇಮಲೋಕ 2 ಚಿತ್ರಕ್ಕೆ ತಮಿಳು ನಟಿಗೆ ಬಲೆಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳು ನಟ ತೇಜು ಅಶ್ವಿನಿ (Teju Ashwini) ಈ ಸಿನಿಮಾದ ನಾಯಕಿ ಎನ್ನುವುದು ಸದ್ಯಕ್ಕಿರುವ ವರ್ತಮಾನ.

Teju Ashwini 2

ಈ ನಡುವೆ ಪ್ರೇಮಲೋಕ 2 ಸಿನಿಮಾ ಕುರಿತಂತೆ ಅನೇಕ ವಿಶೇಷಗಳು ಆಚೆ ಬರುತ್ತಿವೆ. ಅದರಲ್ಲಿ ರವಿಮಾಮ ಮಕ್ಕಳ ಸುದ್ದಿಯೂ ಸೇರಿಕೊಂಡಿದೆ. ಈ ಸಿನಿಮಾದಲ್ಲಿ ತಮ್ಮ ಇಬ್ಬರೂ ಮಕ್ಕಳಿಗೆ ಪಾತ್ರ ಕೊಟ್ಟಿದ್ದಾರೆ. ಆ ಪಾತ್ರಕ್ಕಾಗಿ ತಯಾರಿ ಕೂಡ ಮಾಡಿಸುತ್ತಿದ್ದಾರೆ.

ravichandran with vikram

ಪ್ರೇಮಲೋಕ 2 ಚಿತ್ರಕ್ಕಾಗಿ ಡಾನ್ಸ್ ಮತ್ತು ಮೈ ಹುರಿಗೊಳಿಸಿಕೊಳ್ಳುತ್ತಿರುವೆ. ಅಪ್ಪನೇ ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರೇಮಲೋಕ ಸಿನಿಮಾದ ಹೆಸರೇ ದೊಡ್ಡದು. ಹಾಗಾಗಿ ನಿರೀಕ್ಷೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುತ್ತೇನೆ ಎನ್ನುತ್ತಾರೆ (Manoranjan) ಮನೋರಂಜನ್.

Ravichandran with Khushboo 2

ರವಿಚಂದ್ರನ್ (Ravichandran) ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ತಾವೇ ನಿರ್ದೇಶಿಸಿ, ನಟಿಸಿ ಗೆದ್ದಿದ್ದರು. ಈಗ ಪ್ರೇಮಲೋಕ ಪಾರ್ಟ್ 2  ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಮೇ 30ರಿಂದ ಶೂಟಿಂಗ್ ಕೂಡ ಶುರುವಾಗಲಿದೆ. ಕಾರ್ಯಕ್ರವೊಂದರಲ್ಲಿ ಅತಿಥಿಯಾಗಿ ರವಿಚಂದ್ರನ್ ಭಾಗವಹಿಸಿದ್ದರು. ‘ಪ್ರೇಮಲೋಕ 2’ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 30ರಂದು ‘ಪ್ರೇಮಲೋಕ 2’ (Premaloka 2) ಸಿನಿಮಾವನ್ನು ಆರಂಭಿಸುತ್ತೇನೆ. ನನ್ನ ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸುತ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರ ನಟಿಸುತ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಕ್ರೇಜಿ ಸ್ಟಾರ್ ತಿಳಿಸಿದ್ದಾರೆ.

 

‘ಪ್ರೇಮಲೋಕ 2’ ಸಿನಿಮಾದಲ್ಲಿ ಬರೀ 20-25 ಹಾಡುಗಳು ಇರುತ್ತೆದೆ ಅಷ್ಟೇ. ಆದರೆ ಜೀವನಪೂರ್ತಿ ಇಡೀ ಸಿನಿಮಾ ಚಿಕ್ಕವರಿಂದಿಡಿದು ದೊಡ್ಡವರ ತನಕ ಎಲ್ಲರಿಗೂ ಕಾಡುತ್ತದೆ. ಈ ಸಿನಿಮಾದಲ್ಲಿ ಪ್ರೀತಿ ಇದೆ, ಜಾತಿ ಇಲ್ಲ. ಭೇದ ಭಾವ ಇಲ್ಲ, ಹಣದ ಕುರಿತು ಇಲ್ಲ. ಇದೇ ಬೇರೆ ಥರದ ಕಥೆ ಇರುವ ಸಿನಿಮಾ. ನನಗೆ ಪ್ರೀತಿ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.

Share This Article