‘ಪುಷ್ಪ 2’ ಚಿತ್ರದ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಫಹಾದ್ ಫಾಸಿಲ್

Public TV
1 Min Read
Fahadh Faasil 2

ಸೌತ್ ಸಿನಿ ರಂಗದಲ್ಲಿ ಗೆದ್ದು ಬೀಗಿದ ಸಿನಿಮಾ ಅಂದರೆ ಇತ್ತೀಚಿನ ‘ಪುಷ್ಪ’ (Pushpa Film) ಚಿತ್ರ. ಇದರ ಸೀಕ್ವೆಲ್‌ಗಾಗಿ ಎಲ್ಲರೂ ಎದುರು ನೋಡ್ತಿದ್ದಾರೆ. ಇದರ ನಡುವೆ ನಟ ಫಹಾದ್ ಫಾಸಿಲ್ (Fahadh Faasil) ಅವರು ಪುಷ್ಪ ಚಿತ್ರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಪುಷ್ಪ’ ನನ್ನ ವೃತ್ತಿ ಜೀವನಕ್ಕೆ ಏನೂ ಮಾಡಿಲ್ಲ ಎಂದು ಫಹಾದ್ ಮಾತನಾಡಿದ್ದಾರೆ.

Fahadh Faasil 3

‘ಪುಷ್ಪ’ ಚಿತ್ರದಿಂದ ನಿಮ್ಮ ಖ್ಯಾತಿ ಕೇರಳವನ್ನು ದಾಟಿ ಹೋಗಿದೆ ಇದು ನಿಮಗೆ ತಿಳಿದಿದೆಯೇ? ಎಂದು ನಿರೂಪಕಿ ಫಹಾದ್‌ಗೆ ಕೇಳಿದ್ದಾರೆ. ಅದಕ್ಕೆ ಅವರು ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪುಷ್ಪ ನನ್ನ ವೃತ್ತಿ ಜೀವನಕ್ಕೆ ಏನನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಇದನ್ನು ಸುಕುಮಾರ್ ಅವರ ಎದುರು ಹೇಳುತ್ತೇನೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ನಾನು ಪ್ರಾಮಾಣಿಕನಾಗಿರಬೇಕು. ನಾನು ಇಲ್ಲಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಸುಕುಮಾರ್ ಸರ್ ಮೇಲಿನ ಪ್ರೀತಿಗೆ ಪುಷ್ಪ ಚಿತ್ರ ಮಾಡಿದೆ. ನನ್ನ ಕೆಲಸ ಮಲಯಾಳಂ ಚಿತ್ರರಂಗಕ್ಕೆ ಎಂದಿದ್ದಾರೆ. ಇದನ್ನೂ ಓದಿ:ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್ ಗೆ ಗುಡ್ ಬೈ ಘೋಷಿಸಿದ ಕಂಗನಾ

pushpa 2

ಪ್ಯಾನ್ ಇಂಡಿಯಾ ಸ್ಟಾರ್ ಎಂದು ಕರೆಯುವವರಿಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಅವರು ಒಪ್ಪಿಲ್ಲ. ನಾನು ಮಲಯಾಳಂ ನಟ. ಪ್ಯಾನ್ ಇಂಡಿಯಾಗೂ ನನಗೂ ಸಂಬಂಧವಿಲ್ಲ. ಸಿನಿಮಾ ಬಿಸ್ನೆಸ್ ಮಾಡಬೇಕು ನಿಜ ಆದರೆ, ಅದು ಸೆಕೆಂಡರಿ. ಇಲ್ಲಿ ಮಾಡುವ ರೀತಿಯ ಸಿನಿಮಾಗಳನ್ನು ನಾನು ಎಲ್ಲಿಯೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಂದಹಾಗೆ, ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ, ಫಹಾದ್ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತಾರೆ.

ಅಂದಹಾಗೆ, ಪುಷ್ಪ ಪಾರ್ಟ್ 1ರಲ್ಲಿ ಅಲ್ಲು ಅರ್ಜುನ್‌ಗೆ (Allu Arjun) ವಿಲನ್ ಆಗಿ ಅಬ್ಬರಿಸಿದ್ದರು. ಪುಷ್ಪರಾಜ್‌ಗೆ ಠಕ್ಕರ್ ಕೊಡುವ ವಿಲನ್ ಆಗಿದ್ದರು. ಇಬ್ಬರ ಜುಗಲ್‌ಬಂದಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಪುಷ್ಪ 2ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದೇ ಆಗಸ್ಟ್ 15ಕ್ಕೆ ‘ಪುಷ್ಪ 2’ (Pushpa 2) ಸಿನಿಮಾ ರಿಲೀಸ್ ಆಗುತ್ತಿದೆ.

Share This Article