ಮಳೆಗೆ ಕಾರಿನ ಮೇಲೆ ಮರ ಬಿದ್ದು ಯುವಕ ಸಾವು

Public TV
1 Min Read
Mandya Rain Accident

ಮಂಡ್ಯ: ಸೋಮವಾರ ರಾತ್ರಿ ಮಂಡ್ಯದಲ್ಲಿ (Mandya) ಬಿರುಗಾಳಿ ಸಹಿತ ಸುರಿದ ಮಳೆಗೆ (Rain) ಮರವೊಂದು ಕಾರಿನ (Car) ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮಂಡ್ಯ ನಗರದ ಆಸ್ಪತ್ರೆಯೊಂದರ ಬಳಿ ಈ ಘಟನೆ ಜರುಗಿದೆ. ಮಂಡ್ಯ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ (27) ಮೃತ ಯುವಕ. ಕಾರ್ತಿಕ್ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯ ಆರೋಗ್ಯ ವಿಚಾರಿಸಿ ವಾಪಾಸ್ಸಾಗುತ್ತಿದ್ದ ವೇಳೆ ಬಿರುಗಾಳಿ ಸಹಿತ ಮಳೆ ಬಂದ ಹಿನ್ನೆಲೆ ಬೈಕ್ ನಿಲ್ಲಿಸಿ ಸ್ನೇಹಿತನ ಕಾರು ಹತ್ತಿ ಕುಳಿತಿದ್ದ. ಈ ವೇಳೆ ಮರದ ಕೆಳಗೆ ಕಾರು ನಿಲ್ಲಿಸಿದ್ದರಿಂದ ಬಿರುಗಾಳಿಗೆ ಕಾರಿನ ಮೇಲೆಯೇ ಮರ ಬಿದ್ದಿದೆ. ಇದರಿಂದ ಸ್ಥಳದಲ್ಲೇ ಕಾರ್ತಿಕ್ ಸಾವನ್ನಪ್ಪಿದ್ದು, ಕಾರಿನ ಹೊರಗಡೆ ನಿಂತಿದ್ದ ಸ್ನೇಹಿತ ಪ್ರಾಣಾಪಾಯಾದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಬಿಜೆಪಿಯ 50-60 ಪರ್ಸೆಂಟ್ ಜನರು ನನ್ನ ಜೊತೆ ನಿಂತಿದ್ದಾರೆ: ಈಶ್ವರಪ್ಪ

ಇಂದು ಕಾರ್ತಿಕ್ ಹುಟ್ಟು ಹಬ್ಬವಿತ್ತು. ಹೀಗಾಗಿ ಹೊಸ ಬಟ್ಟೆ ಖರೀದಿಸಿ, ಬಳಿಕ ತಂದೆ ಆರೋಗ್ಯ ವಿಚಾರಿಸಿಕೊಂಡು ತೆರಳುವಾಗ ದುರ್ಘಟನೆ ಜರುಗಿದೆ. ಮೃತ ಕಾರ್ತಿಕ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮತದಾನ ಮಾಡಿ ಮಾದರಿಯಾದ ಶತಾಯುಷಿಗಳು!

Share This Article