ಬೀದರ್/ಬಾಗಲಕೋಟೆ: ರಾಜ್ಯದಲ್ಲಿಂದು 14 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಜನ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ. ಅದರಂತೆ ಬಾಗಲಕೋಟೆ, ಬೀದರ್ ಜಿಲ್ಲೆಗಳಲ್ಲಿ ಶತಾಯುಷಿಗಳು (Centenarian) ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಬಾಲಕೋಟೆಯಲ್ಲಿ (Bagalkote) 104 ವರ್ಷದ ವೃದ್ಧೆ ಹಾಗೂ ಬೀದರ್‌ನಲ್ಲಿ 100 ವರ್ಷದ ಶತಾಯುಷಿ ಮತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಬಾಗಲಕೋಟೆಯಲ್ಲಿ ಬೀಳಗಿ ಪಟ್ಟಣದ ನಿವಾಸಿ ಸಿದ್ದವ್ವ ಸಿದ್ದಪ್ಪ ಜಗ್ಗಲ (104) ಸಖಿ ಪಿಂಕ್ ಬೂತ್‌ನಲ್ಲಿ ಮತದಾನ ಮಾಡಿದ್ದಾರೆ. ಬೀಳಗಿ ಎಂಪಿಎಸ್ ಶಾಲೆಯ ಮತಗಟ್ಟೆ 76ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
Advertisement
Advertisement
ಅಲ್ಲದೇ ಬೀದರ್ ನಗರದ ಮನ್ನಿಯರ್ ತಾಲೀಮ್ ನಿವಾಸಿ ಸುಭದ್ರಬಾಯಿ (100) ತಮ್ಮ ಹಕ್ಕು ಚಲಾಯಿಸುವ ಮೂಲಕ ಇತರರರಿಗೆ ಮಾದರಿಯಾಗಿದ್ದಾರೆ. ಮಗನ ಸಹಾಯದಿಂದ ಮತಗಟ್ಟೆಗೆ ಬಂದು, ಮತಗಟ್ಟೆ ಸಂಖ್ಯೆ 104ರಲ್ಲಿ ಮತದಾನ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Jharkhand: 35 ಕೋಟಿಗೂ ಅಧಿಕ ಹಣ ಜಪ್ತಿ – ಇಡಿಯಿಂದ ಕಾಂಗ್ರೆಸ್ ಸಚಿವರ ಆಪ್ತ ಕಾರ್ಯದರ್ಶಿ, ಮನೆಕೆಲಸದವನ ಬಂಧನ!
Advertisement
ಬಾಗಲಕೋಟೆ: ಮತಗಟ್ಟೆಗೆ ಸಾಂಪ್ರದಾಯಿಕ ಪೂಜೆ:
ಜಿಲ್ಲೆಯ 1946 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಆದ್ರೆ ಬಾಗಲಕೋಟೆ ನಗರದ ಮುಚಖಂಡಿ ಕ್ರಾಸ್ ನಿವಾಸಿಯಾಗಿರುವ ವಿಠ್ಠಲ್ ಮಾಳಗೊಂಡ್ ಹಾಗೂ ಸುಜಾತಾ ದಂಪತಿ ಪಾದರಕ್ಷೆಯನ್ನ ಧರಿಸದೇ, ಕಂಬಳಿ ಹೊದ್ದು, ಮತಗಟ್ಟೆಗೆ ಪೂಜೆ ಸಲ್ಲಿಸಿ ಮತದಾನ ದಾನ ಮಾಡಿ ಗಮನ ಸೆಳೆದಿದ್ದಾರೆ.
Advertisement
ಮತಗಟ್ಟೆ ಸಂಖ್ಯೆ 91, 92ಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕಂಬಳಿ ಹಾಕಿಕೊಂಡು ಮತಗಟ್ಟೆ ಬಾಗಿಲಿಗೆ ವಿಭೂತಿ, ಕುಂಕುಮ ಹಚ್ಚಿ, ದೂದುಬತ್ತಿ ಬೆಳಗಿ ಮಾಲೆ ಹಾಕಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಬಳಿಕ ಮತಚಲಾಯಿಸಿದ್ದಾರೆ. ಇದನ್ನೂ ಓದಿ: Lok Sabha Election: ಶಿವಮೊಗ್ಗದಲ್ಲಿ ಅತಿ ಹೆಚ್ಚು, ರಾಯಚೂರಿನಲ್ಲಿ ಕಡಿಮೆ ಮತದಾನ