ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್

Public TV
1 Min Read
pawan kalyan

ತೆಲುಗು ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಸದ್ಯ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ‘ಹರಿಹರ ವೀರ ಮಲ್ಲು’ (Harihara Veera Mallu) ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಸಖತ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಧರ್ಮಕ್ಕೋಸ್ಕರ ಯುದ್ಧ ಮಾಡಲು ಪವನ್ ಸಜ್ಜಾಗಿದ್ದಾರೆ.

pawan kalyan

17ನೇ ಶತಮಾನದ ಮೊಘಲರು ಆಳ್ವಿಕೆಯಲ್ಲಿ ನಡೆದ ಒಂದಿಷ್ಟು ನೈಜ ಕಥೆಯನ್ನಿಟ್ಟು ಸಿನಿಮಾ ಮಾಡಲಾಗಿದ್ದು, ಇದರ ಝಲಕ್‌ ಅನ್ನು ಟೀಸರ್‌ನಲ್ಲಿ ತೋರಿಸಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಬರಲಿದೆ. 5 ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಇದನ್ನೂ ಓದಿ:‘ಪುಷ್ಪ 2’ ಸಾಂಗ್ ಟ್ರೆಂಡಿಂಗ್- ತಗ್ಗೋದೇ ಇಲ್ಲ ಎಂದ ಪುಷ್ಪರಾಜ್‌ಗೆ ಫ್ಯಾನ್ಸ್ ಫಿದಾ

pawan kalyan

ರಾಜರು, ನವಾಬರು ಜನರ ಡುಡಿಮೆಯನ್ನು ಕಿತ್ತುಕೊಳ್ಳಲು ಬಂದರೆ ಅವರಿಂದ ಕಾಪಾಡಲು ದೇವರು ಒಂದಲ್ಲ ಒಂದು ರೂಪದಲ್ಲಿ ಬರುತ್ತಾನೆ ಎಂದು ಹಿನ್ನೆಲೆ ಧ್ವನಿ ಟೀಸರ್‌ನಲ್ಲಿ ಹೈಲೆಟ್ ಆಗಿದೆ. ಅದರಲ್ಲಿ ಪವನ್ ಕಲ್ಯಾಣ್ ಎಂಟ್ರಿ ಮತ್ತು ಮೊಘಲ್ ಚಕ್ರವರ್ತಿ ಆಗಿರುವ ಬಾಬಿ ಡಿಯೋಲ್ (Bobby Deol) ಆಗಮನ ಖಡಕ್ ಆಗಿದೆ.

ಪವನ್ ಕಲ್ಯಾಣ್‌ಗೆ ನಾಯಕಿಯಾಗಿ ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ (Nidhdhi Agerwal) ನಟಿಸಿದ್ದಾರೆ. ಸ್ಟಾರ್ ಕಲಾವಿದರ ದಂಡೆ ಇರುವ ಈ ಚಿತ್ರವು ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಚುನಾವಣೆ ಪ್ರಚಾರ ಜೋರಾಗಿದೆ. ಈ ಹೊತ್ತಲ್ಲಿ ಅಭಿಮಾನಿಗಳ ಗಮನ ಸೆಳೆಯಲು ಚಿತ್ರದ ಟೀಸರ್ ರಿಲೀಸ್ ಮಾಡಿ ತಂತ್ರ ರೂಪಿಸಿದ್ದಾರೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Share This Article