ರಾಯ್‌ಬರೇಲಿಯಿಂದ ಸ್ಪರ್ಧಿಸಲ್ಲ ಪ್ರಿಯಾಂಕಾ – ಇನ್ನೂ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್‌

Public TV
1 Min Read
Priyanka Gandhi Vadra

ನವದೆಹಲಿ: ಐದನೇ ಹಂತದ ಲೋಕಸಭೆ ಚುನಾವಣೆ (Lok Sabha Election) ಸಂಬಂಧ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಉಳಿದಿದೆ. ಆದರೂ ಅಮೇಠಿ, ರಾಯ್‌ಬರೇಲಿಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಫೈನಲ್ ಮಾಡಲಾಗದೇ ಕಾಂಗ್ರೆಸ್ ಹೈಕಮಾಂಡ್ (Congress High Command) ಒದ್ದಾಡುತ್ತಿದೆ.

ದೆಹಲಿಯಲ್ಲಿ ಸಭೆ ನಡೆದು ಎಂಬತ್ತು ಗಂಟೆ ಕಳೆದರೂ ಈವರೆಗೂ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮೇ ಮೂರರವರೆಗೂ ಅಮೇಠಿ (Amethi) ವಿಚಾರದಲ್ಲಿ ಸಸ್ಪೆನ್ಸ್ ಮುಂದುವರೆಯುತ್ತದೆ. ಇದನ್ನೂ ಓದಿ: ರಾಯ್‌ಬರೇಲಿಗೆ ನೂಪೂರ್‌ ಶರ್ಮಾ ಬಿಜೆಪಿ ಅಭ್ಯರ್ಥಿ?

Rahul Gandhi Priyanka Gandhi Vadra Bharat Jodo Yatra 1

ರಾಯ್‌ಬರೇಲಿ (Raibareli) ಅಭ್ಯರ್ಥಿ ವಿಚಾರದಲ್ಲಿ ಅನಿಶ್ಚಿತತೆ ಮುಂದುವರೆದಿದೆ. ಸದ್ಯದ ಮಾಹಿತಿ ಪ್ರಕಾರ, ರಾಯ್‌ಬರೇಲಿಯಿಂದ ಸ್ಪರ್ಧೆಗೆ ಪ್ರಿಯಾಂಕಾ ವಾದ್ರಾ (Priyanka Vadra) ಆಸಕ್ತಿ ತೋರಿಸಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಿದರೆ ದೇಶದ ಎಲ್ಲೆಡೆ ಪ್ರಚಾರ ಮಾಡಲು ಆಗುವುದಿಲ್ಲ ಎಂಬ ಕಾರಣವನ್ನು ನೀಡುವ ಮೂಲಕ ಕಣಕ್ಕಿಳಿಯಲು ಪ್ರಿಯಾಂಕಾ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಅಮೇಠಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ರಾಯ್‌ಬರೇಲಿ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಸಹ ಇಲ್ಲಿಯವರೆಗೆ ಪ್ರಕಟಿಸಿಲ್ಲ. ಹೀಗಾಗಿ ಎರಡು ಕ್ಷೇತ್ರಗಳು ಈಗ ಭಾರೀ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿ ರಾಕೇಶ್‌ ಸಿದ್ದರಾಮಯ್ಯ ವಿಚಾರ ಕೆದಕಿದ ಹೆಚ್‌ಡಿಕೆ

ರಾಯ್‌ಬರೇಲಿ ಕೈ ಕೋಟೆ:
ರಾಯ್‌ಬರೇಲಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದರು. 1999 ರಿಂದ ಸೋನಿಯಾ ಗಾಂಧಿ ಲೋಕಸಭೆ ಚುನಾವಣೆಯನ್ನು ಗೆಲ್ಲುತ್ತಾ ಬಂದಿದ್ದಾರೆ. 1999 ರಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದ ಅವರು 2004ರ ಚುನಾವಣೆಯಿಂದ 2019ರ ಚುನಾವಣೆಯವರೆಗೂ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸತತವಾಗಿ ಆಯ್ಕೆ ಆಗುತ್ತಿದ್ದಾರೆ. ಈ ಬಾರಿ ಸೋನಿಯಾ ಗಾಂಧಿ ರಾಜ್ಯಸಭೆ ಮೂಲಕ ಸಂತಸ್‌ ಪ್ರವೇಶಿಸಿದ್ದಾರೆ.

Share This Article