‘ಬಿಗ್ ಬಾಸ್’ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastry) ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ರಾಧಿಕಾ ಸೀರಿಯಲ್‌ಗೆ ಗುಡ್ ಬೈ ಹೇಳಿದ ಬಳಿಕ ಈಗ ಮತ್ತೆ ‘ಜಾನಕಿ ಸಂಸಾರ’ (Janaki Samsara) ಎಂಬ ಸೀರಿಯಲ್ ಮೂಲಕ ಬರಲಿದ್ದಾರೆ. ಹೀರೋಯಿನ್ ಆಗಿ ಮಿಂಚಿದ್ದ ನಟಿ ಈಗ ವಿಲನ್ ಆಗಿ ಅಬ್ಬರಿಸಲಿದ್ದಾರೆ.
‘ಕೃಷ್ಣ ರುಕ್ಮಿಣಿ’ ಖ್ಯಾತಿಯ ನಟಿ ಅಂಜನಾ ಶ್ರೀನಿವಾಸ್ ನಟನೆಯ ‘ಜಾನಕಿ ಸಂಸಾರ’ಕ್ಕೆ ಕಾವ್ಯಾ ಕಾಲಿಟ್ಟಿದ್ದಾರೆ. ಸಾಕಷ್ಟು ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದ್ದ ಕಾವ್ಯಾ ಈಗ ವಿಲನ್ ಆಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ:ಬಂಪರ್ ಆಫರ್ ಬಾಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ವಿನಯ್ ಗೌಡ
ಕಾವ್ಯಾ ಶಾಸ್ತ್ರಿ ಅದ್ಭುತ ನಟಿ ಎಂಬುದರಲ್ಲಿ ಮಾತಿಲ್ಲ. ಹಲವು ವರ್ಷಗಳಿಂದ ಚಿತ್ರರಂಗಲ್ಲಿ ನಿರೂಪಕಿ, ನಟಿಯಾಗಿ ಪಳಗಿದ್ದಾರೆ. ವಿಲನ್ ಆಗಿ ಬರುತ್ತಿರುವ ಕಾವ್ಯಾರನ್ನು ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅಂದಹಾಗೆ, ಮೇ 6ರಂದು 8 ಗಂಟೆಗೆ ಜಾನಕಿ ಸಂಸಾರ ಪ್ರಸಾರವಾಗಲಿದೆ.
ಈ ಹಿಂದೆ ಶುಭವಿವಾಹ, ಬಿಗ್ ಬಾಸ್ ಸೀಸನ್- 4 (Bigg Boss Kannada 4) ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಕಾವ್ಯಾ ಶಾಸ್ತ್ರಿ ಕಳೆದ ವರ್ಷ ರಾಧಿಕಾ ಸೀರಿಯಲ್‌ಗೆ ಕಾರಣಾಂತರಗಳಿಂದ ಅರ್ಧಕ್ಕೆ ಕೈಬಿಟ್ಟಿದ್ದಾರೆ.