ಕಿರುತೆರೆ ನಟಿ ಕೌಸ್ತುಭ ಮಣಿ (Kaustubha Mani) ಅದ್ಧೂರಿಯಾಗಿ ಇಂದು (ಏ.26) ಮದುವೆಯಾಗಿದ್ದಾರೆ. ಸಿದ್ಧಾಂತ್ ಸತೀಶ್ (Sidhanth Satish) ದಾಂಪತ್ಯ (Wedding) ಜೀವನಕ್ಕೆ ನಟಿ ಕಾಲಿಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿರುವ ನಟಿಗೆ ಅಭಿಮಾನಿಗಳು ಶುಭಕೋರಿದ್ದಾರೆ.
ಕೌಸ್ತುಭ ಮದುವೆ ಫೋಟೋ ವೈರಲ್ ಆಗಿದ್ದು, ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ವರ ಸಿದ್ಧಾಂತ್ ಪಂಚೆ ಮತ್ತು ಶಲ್ಯ ಧರಿಸಿದ್ದಾರೆ. ನಟಿಯ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದರು.
ಪ್ರಿ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಲಿಪ್‌ಲಾಕ್ ಫೋಟೋ ಶೇರ್ ಮಾಡುವ ಮೂಲಕ ಈ ಜೋಡಿ ಗಮನ ಸೆಳೆದಿತ್ತು. ಪುಟ್ಟ ವಿಮಾನದಲ್ಲಿ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಇದನ್ನೂ ಓದಿ:ದ್ವೇಷದ ವಿರುದ್ಧ ಮತ ಹಾಕಿದ್ದೇನೆ: ನಟ ಪ್ರಕಾಶ್ ರೈ ವಿಡಿಯೋ ವೈರಲ್
ಅಂದಹಾಗೆ, ಕೌಸ್ತುಭ ಮಣಿ ಅವರದ್ದು ಅರೇಂಜ್ ಮ್ಯಾರೇಜ್. ಸಿದ್ಧಾಂತ್ ಸತೀಶ್ ಅವರು ಸಾಪ್ಟ್ವೇರ್ ಡೆವಲಪರ್ ಆಗಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ಧಾಂತ್ ಅವರು ಕೆನಡಾದ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದರು. ಇತ್ತೀಚೆಗೆ ನಟಿಯ ಎಂಗೇಜ್‌ಮೆಂಟ್ ಅದ್ಧೂರಿಯಾಗಿ ನಡೆದಿತ್ತು.
ನನ್ನರಸಿ ರಾಧೆ, ಗೌರಿ ಶಂಕರ ಸೀರಿಯಲ್‌ನಲ್ಲಿ ಕೌಸ್ತುಭ ನಟಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾದಲ್ಲಿ ಶಿವಣ್ಣ ಮತ್ತು ರಾಜ್ ಬಿ ಶೆಟ್ಟಿ ಜೊತೆ ನಟಿ ತೆರೆಹಂಚಿಕೊಂಡಿದ್ದಾರೆ.