ಚಿಕ್ಕಮಗಳೂರು: ಯುವತಿಯೊಬ್ಬಳು ಹಸೆಮಣೆ ಏರುವ ಮುನ್ನ ಮತ ಚಲಾಯಿಸಿ ಜನರ ಗಮನ ಸೆಳೆದ ಘಟನೆ ಶೃಂಗೇರಿ (Sringeri) ತಾಲೂಕಿನ ಕೂತಗೋಡಿನಲ್ಲಿ ನಡೆದಿದೆ.
ಗ್ರಾಮದ ಸ್ಪಂದನ ಮತ ಚಲಾಯಿಸಿದ ಯುವತಿ. ಕಲ್ಯಾಣ ಮಂಟಪಕ್ಕೆ ತೆರಳುವ ವೇಳೆ ದಾರಿಯ ಮಧ್ಯೆ ಕೂತಗೋಡು ಮತಗಟ್ಟೆಗೆ ತೆರಳಿ ಅವರು ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ
ಮದುವೆ ದಿನ ತಪ್ಪದೇ ಬಂದು ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ ಮದುಮಗಳಿಗೆ (Bride) ಚುನಾವಣಾ ಸಿಬ್ಬಂದಿ ಹಾಗೂ ಮತದಾರರು ಶುಭ ಹಾರೈಸಿದ್ದಾರೆ.
ಇನ್ನೂ, ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲೂ ಸಮೀಕ್ಷಾ ಎಂಬ ಯುವತಿ ಸಹ ಕಲ್ಯಾಣ ಮಂಟಪಕ್ಕೆ ತೆರಳುವ ಮುನ್ನ ಬೂತ್‍ನಲ್ಲಿ ಮೊದಲು ಮತದಾನ ಮಾಡಿ ತೆರಳಿದ್ದರು. ಇದನ್ನೂ ಓದಿ: ಮತ ಚಲಾಯಿಸಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಷ್ಟೇ ಧನ್ಯತೆ: ಪೇಜಾವರ ಶ್ರೀ