Coolie: ಮಾಸ್ ಆದ ತಲೈವಾ- ಟೀಸರ್ ನೋಡಿ ಫ್ಯಾನ್ಸ್ ಫಿದಾ

Public TV
1 Min Read
rajanikanth 2 1

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ 171 ಸಿನಿಮಾದ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಮಾಸ್ ಆಗಿ ತಲೈವಾ ಎಂಟ್ರಿ ಕೊಟ್ಟಿದ್ದಾರೆ. ಟೀಸರ್ ಅಂತೂ ಮಸ್ತ್ ಆಗಿದೆ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.

rajanikanth 2ರಜನಿಕಾಂತ್ ಹೊಸ ಚಿತ್ರಕ್ಕೆ ‘ಕೂಲಿ’ (Coolie Film) ಎಂದು ಟೈಟಲ್ ಇಡಲಾಗಿದೆ. ಕೂಲಿಂಗ್ ಗ್ಲ್ಯಾಸ್ ಧರಿಸಿ ತಲೈವಾ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ.‌ ಇದನ್ನೂ ಓದಿ:ಹಾರರ್‌ ಕಥೆ ಹೇಳಲು ಸಜ್ಜಾದ ಸನ್ನಿ ಲಿಯೋನ್

ಟೀಸರ್ ಬ್ಲ್ಯಾಕ್ & ವೈಟ್ ಥೀಮ್‌ನಲ್ಲಿ ಮೂಡಿ ಬಂದಿದೆ. ಆದರೆ ಇದರಲ್ಲಿ ಇರುವ ಬಂಗಾರದ ವಸ್ತುಗಳನ್ನು ಮಾತ್ರ ಹೈಲೆಟ್ ಮಾಡಿ ತೋರಿಸಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕುರಿತ ಸಿನಿಮಾ ಎಂಬುದರ ಸುಳಿವನ್ನು ಚಿತ್ರತಂಡ ನೀಡಿದೆ.

rajanikanth 1 1

ಗೋಲ್ಡ್ ಬಿಸ್ಟೆಟ್, ಗೋಲ್ಡ್ ವಾಚ್ ಜೊತೆಗೆ ಚಿನ್ನದ ರಾಶಿಯೇ ಇರುವ ಜಾಗಕ್ಕೆ ರಜನಿಕಾಂತ್ ಎಂಟ್ರಿ ನೀಡುತ್ತಾರೆ. ಅಲ್ಲಿರುವ ಖದೀಮರಿಗೆ ಗೋಲ್ಡ್ ವಾಚ್‌ಗಳಿಂದ ಮಾಡಿದ ಚೈನ್‌ನಿಂದಲೇ ಬೆಂಡೆತ್ತಿದ್ದಾರೆ. ಈ ರೀತಿಯ ಆ್ಯಕ್ಷನ್ ದೃಶ್ಯದ ಮೂಲಕ ಅವರ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಟೀಸರ್ ಮೂಲಕ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಅಭಿಮಾನಿಗಳ ಕೌತುಕ ಕೆರಳಿಸುವಲ್ಲಿ ಗೆದ್ದಿದ್ದಾರೆ.

‘ಜೈಲರ್’ (Jailer) ಸಿನಿಮಾದ ಸಕ್ಸಸ್‌ನಿಂದ ರಜನಿಕಾಂತ್ ಗೆದ್ದು ಬೀಗಿದ್ದರು. ಆದರೆ ಲಾಲ್ ಸಲಾಮ್‌ನಿಂದ ತಲೈವಾಗೆ ಸೋಲಿನ ಕಹಿ ಸಿಕ್ಕಿತ್ತು. ಈಗ ‘ಕೂಲಿ’ ಸಿನಿಮಾದ ಟೀಸರ್‌ನಿಂದ ಫ್ಯಾನ್ಸ್‌ಗೆ ಭರವಸೆ ಮೂಡಿದೆ.

Share This Article