ಬಿಯರ್ ಬಾಟ್ಲಿಯಲ್ಲಿ ಇರಿದು ಬಾರ್ ಸಿಬ್ಬಂದಿ ಹತ್ಯೆಗೈದ ಕುಡುಕ

Public TV
1 Min Read
madikeri murder

ಮಡಿಕೇರಿ: ಕುಡಿದ ಮತ್ತಿನಲ್ಲಿ ಕುಡುಕನೋರ್ವ ಬಾರ್ ಸಿಬ್ಬಂದಿಗೆ ಬಿಯರ್ ಬಾಟಲಿಯಿಂದ (Beer Bottle) ಇರಿದು ಹತ್ಯೆ ಮಾಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರದಲ್ಲಿ (Kushalnagar) ಭಾನುವಾರ ರಾತ್ರಿ ನಡೆದಿದೆ.

ಕುಶಾಲನಗರದ ಹೃದಯಭಾಗದಲ್ಲಿರುವ ಬಾರ್&ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ ಈ ಕೃತ್ಯ ನಡೆದಿದ್ದು, ಜನತಾ ಕಾಲೋನಿಯ ಹರ್ಷ ಎಂಬಾತ ಬಾರ್ ಸಿಬ್ಬಂದಿ ಸಂತೋಷ್‌ನನ್ನು ಇರಿದು ಕೊಂದಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಹರ್ಷ, ಅಮಲಿನಲ್ಲಿ ಸಂತೋಷ್ ಜೊತೆಗೆ ಕಲಹನಿರತನಾಗಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇದರಿಂದ ಕೋಪಗೊಂಡು ಹರ್ಷ ಬಿಯರ್ ಬಾಟಲಿಯಿಂದ ಸಂತೋಷ್‌ನ ತಲೆ ಮತ್ತು ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಾಯಳು ಸಂತೋಷ್ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹಟ್ಟಿಗೆ ನುಗ್ಗಿ ಕುರಿಗಳನ್ನು ತಿಂದು ತೇಗಿ ನಿದ್ದೆಗೆ ಜಾರಿದ ಚಿರತೆ!

ಆರೋಪಿ ಹರ್ಷನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ‘ಕೈ’ ನಾಯಕರ ಪ್ರಣಾಳಿಕೆ ಅಸ್ತ್ರಕ್ಕೆ ಹೆಚ್‌ಡಿಕೆ ಕಾವೇರಿ ಪ್ರತ್ಯಸ್ತ್ರ

Share This Article