ಪೊಲೀಸರ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗೆ ನೇಹಾ ತಂದೆ ಆಗ್ರಹಿಸಿದ್ದಾರೆ: ಜೆಪಿ ನಡ್ಡಾ

Public TV
1 Min Read
Hubballi Neha Murder Case BJP President JP Nadda meets Nehas family calls for a CBI probe in the case 2

ಹುಬ್ಬಳ್ಳಿ: ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ನೇಹಾ ಹಿರೇಮಠ್‌ (Neha Hiremath) ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

ನೇಹಾ ತಂದೆ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನ್‌ ಹಿರೇಮಠ್‌ (Niranjan Hiremath) ಮತ್ತು ಗೀತಾ ಅವರನ್ನು ಭಾನುವಾರ ಸಂಜೆ ಭೇಟಿಯಾಗಿ ಮಾತುಕತೆ ನಡೆಸಿದರು. ನಡ್ಡಾ ಜೊತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶಾಸಕರುಗಳಾದ ಅರವಿಂದ್ ಬೆಲ್ಲದ್‌, ಮಹೇಶ್ ಟೆಂಗಿನಕಾಯಿ, ಎಂ ಆರ್ ಪಾಟೀಲ್ ಸೇರಿ ವಿವಿಧ ಮುಖಂಡು ನಡ್ಡಾಗೆ ಸಾಥ್ ನೀಡಿದರು. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಅನಾರೋಗ್ಯ – ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಗೈರು

 

ಭೇಟಿ ಬಳಿಕ ಮಾತನಾಡಿದ ನಡ್ಡಾ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ. ಬಿಜೆಪಿ, ಇಡಿ ದೇಶ ಅವರ ಕುಟುಂಬದೊಂದಿಗೆ ಇದೆ. ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದರು. ಇದನ್ನೂ ಓದಿ: ವಯನಾಡ್‌ನಲ್ಲಿ ರಾಹುಲ್‌ಗೆ ಬಿಗ್‌ ಶಾಕ್‌ – ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ

ತನಿಖೆಯ ದಾರಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್‌ ತುಷ್ಟೀಕರಣಕ್ಕಾಗಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಸರ್ಕಾರದ ತುಷ್ಟೀಕರಣವನ್ನು ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: Jammu Kashmir Election: ಹೆಡ್‌ ಮಾಸ್ತರ್‌ ಮನೆ ಮೇಲೆ ದಾಳಿ – ಪಿಸ್ತೂಲ್‌, ಚೀನಾ ಗ್ರೆನೇಡ್‌ ವಶ

ಪೊಲೀಸರು ಪ್ರಕರಣದ ತೀವ್ರತೆ ಅರಿತು ತನಿಖೆ ಮಾಡಬೇಕು. ರಾಜ್ಯ ಪೊಲೀಸರು ಅಸಮರ್ಥರಿದ್ದರೆ ಸಿಬಿಐಗೆ (CBI) ಪ್ರಕರಣವನ್ನು ಹಸ್ತಾಂತರಿಸಲಿ. ನೇಹಾ ತಂದೆಯೂ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ನೇಹಾ ಕುಟುಂಬಕ್ಕೆ ಸ್ಥಳೀಯ ಪೊಲೀಸರ ತನಿಖೆ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಸಿಬಿಐ ತನಿಖೆಗೆ ಪ್ರಕರಣ ಒಪ್ಪಿಸಬೇಕು. ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಬಿಜೆಪಿ ಮಾಡಲಿದೆ ಎಂದರು

 

Share This Article