ಮಹಾಬಲಿಪುರಂನಲ್ಲಿ ಬೀಡು ಬಿಟ್ಟ ಸುದೀಪ್: ಸಾಹಸ ಸನ್ನಿವೇಶದಲ್ಲಿ ಕಿಚ್ಚ

Public TV
1 Min Read
Sudeep

ಸುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮಹಾಬಲಿಪುರಂನಲ್ಲಿ (Mahabalipuram) ನಡೆಯುತ್ತಿದೆ. ಸಿನಿಮಾದ ಪ್ರಮುಖ ಸಾಹಸ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿದ್ದು, ಈ ಸನ್ನಿವೇಶದ ಶೂಟಿಂಗ್ ನಲ್ಲಿ ಕಿಚ್ಚ ಭಾಗಿಯಾಗಿದ್ದಾರೆ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಇದಾದ ನಂತರ ಕಿಚ್ಚ ಯಾವ ಸಿನಿಮಾಗೆ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನುವ ಕುತೂಹಲ ಮೂಡಿದೆ.

sudeep

‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ತಮಿಳು ನಾಡಿನ (Tamil Nadu) ಮಹಾಬಲಿಪುರಂನಲ್ಲಿ ನಡೆಯುತ್ತಿದೆ. ಕಿಚ್ಚ ಸುದೀಪ್ ಸೇರಿದಂತೆ ಹಲವು ಕಲಾವಿದರು ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಮಾಹಿತಿಯನ್ನೂ ಸ್ವತಃ ಕಲಾವಿದರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

sudeep 1

ಮೊನ್ನೆಯಷ್ಟೇ ಸುದೀಪ್ (Sudeep) ಮ್ಯಾಕ್ಸ್ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ನೀಡಿದ್ದರು. 15 ದಿನಗಳ ಕಾಲ ಶೂಟಿಂಗ್ ಮುಗಿಸಿದರೆ, ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗತ್ತೆ. ನಂತರ ಮೇ ತಿಂಗಳಿನಲ್ಲಿ ಚಿತ್ರ ರಿಲೀಸ್ (Release) ಆಗಬಹುದು ಅಂದಿದ್ದರು.

 

‘ಮ್ಯಾಕ್ಸ್’ ಸಿನಿಮಾ ಬಗ್ಗೆ ಅಭಿಮಾನಿಗಳು ಪದೇ ಪದೇ ಅಪ್‌ಡೇಟ್ ಕೇಳುತ್ತಲೇ ಇರುತ್ತಾರೆ. ಅದಕ್ಕೆ ಈ ಹಿಂದೆಯೂ ಪ್ರತಿಕ್ರಿಯೆ ನೀಡಿದ್ದರು ಸುದೀಪ್,  ‘ನಿಮ್ಮ ಪ್ರೀತಿ, ಕ್ಯೂರಿಯಾಸಿಟಿ ನನಗೆ ಅರ್ಥವಾಗುತ್ತದೆ. ಆದರೆ, ಸಿನಿಮಾ ಶೂಟ್ (Shooting) ಪೂರ್ಣಗೊಳ್ಳದೆ ಆ ಬಗ್ಗೆ ಅಪ್‌ಡೇಟ್ ನೀಡೋದು ಹೇಗೆ’ ಅನ್ನೋದು ಸುದೀಪ್ ಅವರ ಪ್ರಶ್ನೆಯಾಗಿತ್ತು. ನವೆಂಬರ್‌ನಲ್ಲಿ ಮಳೆಯಿಂದ ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್‌ನಲ್ಲಿ ಕೆಲವು ಅಡೆತಡೆಗಳು ಎದುರಾದವು. ಈಗ ಸಂಕ್ರಾಂತಿ ಬಳಿಕ ಮತ್ತೆ ‘ಮ್ಯಾಕ್ಸ್’ ಶೂಟಿಂಗ್ ಶುರು ಆಗಿದೆ ಎಂದು ತಿಳಿಸಿದ್ದರು.

Share This Article