ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ

Public TV
1 Min Read
mrunal thakur

ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್‌ಗೆ (Mrunal Thakur) ಇದೀಗ ಭಾರೀ ಬೇಡಿಕೆಯಿದೆ. ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾ ಕೊಟ್ಮೇಲೆ ‘ಸೀತಾರಾಮಂ’ ನಟಿಯ ಅದೃಷ್ಟ ಖುಲಾಯಿಸಿದೆ. ಬಿಟೌನ್ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ಹೀರೋಯಿನ್ ಆಗಿ ಮೃಣಾಲ್ ಸೆಲೆಕ್ಟ್ ಆಗಿದ್ದಾರೆ.

mrunal thakur 1ಬಾಲಿವುಡ್‌ನ ಹಾಟ್ ಹೀರೋ ಸಿದ್ಧಾಂತ್ ಚತುರ್ವೇದಿಗೆ (Siddhant Chaturvedi) ಮೃಣಾಲ್ ನಾಯಕಿಯಾಗಿದ್ದಾರೆ. ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಸದ್ಯ ಸಿನಿಮಾ ವರ್ಕ್ಶಾಪ್‌ನಲ್ಲಿ ನಟಿ ಭಾಗಿಯಾಗುತ್ತಿದ್ದಾರೆ. ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಮೃಣಾಲ್. ಇದನ್ನೂ ಓದಿ:ಇಡಿ ದಾಳಿ ಬಳಿಕ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ದಂಪತಿ ಪ್ರತಿಕ್ರಿಯೆ

Mrunal Thakur 2

ಇತ್ತೀಚೆಗೆ ಮೃಣಾಲ್‌ರನ್ನು ಆಫೀಸ್‌ಗೆ ಕರೆಸಿ ಕಥೆ ಬಗ್ಗೆ ಚರ್ಚೆಸಿದ್ದರು ಬನ್ಸಾಲಿ ಟೀಮ್. ಅಷ್ಟು ಸುಲಭವಾಗಿ ಯಾರಿಗೂ ಮಣೆ ಹಾಕದ ನಿರ್ದೇಶಕ ಸಂಜಯ್ ಈಗ ಮೃಣಾಲ್ ನಟನೆಯನ್ನು ಮೆಚ್ಚಿ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಉತ್ತಮ ಪಾತ್ರವನ್ನೇ ಮೃಣಾಲ್‌ಗೆ ನೀಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಗರಡಿಯಲ್ಲಿ ಮೃಣಾಲ್ ಪಳಗುತ್ತಾರೆ ಎಂದರೆ ಸಕ್ಸಸ್ ಕಟ್ಟಿಟ್ಟ ಬುತ್ತಿ ಎಂದರ್ಥ. ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಚಿತ್ರದ ಸಕ್ಸಸ್ ನಂತರ ಮೃಣಾಲ್ ಮತ್ತೆ ಹೇಗೆ ಹವಾ ಕ್ರಿಯೇಟ್ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.

Share This Article