ಗುಜರಾತ್‌ನ ಗಾಂಧೀನಗರ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್‌ ಶಾ ನಾಮಪತ್ರ ಸಲ್ಲಿಕೆ

Public TV
1 Min Read
amit shah nomination

ಗಾಂಧೀನಗರ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ (Amit Shah) ಅವರು ಮುಂಬರುವ ಲೋಕಸಭೆ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಗುಜರಾತ್ (Gujarat) ಸಿಎಂ ಭೂಪೇಂದ್ರ ಪಟೇಲ್ (Bhupendra Patel) ಸಾಥ್‌ ನೀಡಿದ್ದಾರೆ.

ಅಮಿತ್‌ ಶಾ ಅವರು ಗಾಂಧೀನಗರ (Gandhinagar) ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ತನ್ನ ಪಕ್ಷದ ಕಾರ್ಯದರ್ಶಿ ಸೋನಾಲ್ ಪಟೇಲ್ ಅವರನ್ನು ಗಾಂಧೀನಗರದಿಂದ ಕಣಕ್ಕಿಳಿಸಿದೆ. ಗುಜರಾತ್‌ನಲ್ಲಿ ಮೇ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ನಕ್ಸಲರು ಶಸ್ತ್ರಾಸ್ತ್ರ ಎತ್ತಿದರೆ ತಕ್ಕ ಉತ್ತರ ಸಿಗಲಿದೆ: ಅಮಿತ್ ಶಾ ಎಚ್ಚರಿಕೆ

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಅವರು 5,57,014 ಮತಗಳ ಅಂತರದಿಂದ ಮೊದಲ ಬಾರಿಗೆ ಸ್ಥಾನವನ್ನು ಗೆದ್ದಿದ್ದರು. ಅವರು 3,37,610 ಮತಗಳನ್ನು (26.26%) ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ ಸಿಜೆ ಚಾವ್ಡಾ ಅವರನ್ನು ಸೋಲಿಸಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಧೀಮಂತ ಮತ್ತು ಮಾಜಿ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಆರನೇ ಬಾರಿಗೆ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು. ಇದನ್ನೂ ಓದಿ: ಮೊದಲ ಹಂತದ ಮತದಾನ: 716 ಕೋಟಿ ಆಸ್ತಿ ಒಡೆಯ – ʻಕೈʼನಾಯಕ ನಂ.1 ಶ್ರೀಮಂತ ಅಭ್ಯರ್ಥಿ!

Share This Article