ತೆಲುಗಿಗೆ ಸಿಂಗಾರ ಸಿರಿ- ನಿತಿನ್ ಜೊತೆಗಿನ ಚಿತ್ರಕ್ಕಾಗಿ ಭರ್ಜರಿ ತಯಾರಿ

Public TV
1 Min Read
saptami gowda

‘ಕಾಂತಾರ’ ಬ್ಯೂಟಿ ಸಪ್ತಮಿ ಗೌಡ (Sapthami Gowda) ಸದ್ಯ ಬ್ಯುಸಿ ನಟಿಯಾಗಿದ್ದಾರೆ. ಕನ್ನಡದ ಜೊತೆಗೆ ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಬಾಲಿವುಡ್ ನಂತರ ತೆಲುಗಿಗೆ ಹಾರಿರುವ ನಟಿ ಇದೀಗ ನಿತಿನ್‌ಗೆ (Nithin) ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಆ ಸಿನಿಮಾದ ಪಾತ್ರಕ್ಕಾಗಿ ಸಪ್ತಮಿ ತಯಾರಿ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.

sapthami

ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ‘ಕಾಂತಾರ’ (Kantara) ನಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ನಿತಿನ್ (Nithin) ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಈಗಾಗಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನಾನು ಹೋಗಿ ಸೆಟ್ ಸೇರಿಕೊಳ್ಳಬೇಕಿದೆ ಎಂದಿದ್ದಾರೆ. ವಿಶೇಷ ಎಂದರೆ ಸಪ್ತಮಿ ಗೌಡ ಅವರು ಈ ಸಿನಿಮಾಗಾಗಿ ಕುದುರೆ ಸವಾರಿ ಕಲಿಯುತಿದ್ದಾರೆ. ಈ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ನಾನು ಕುದುರೆ ಸವಾರಿ ಕಲಿಯುತ್ತಿದ್ದೇನೆ. ಸಂಪೂರ್ಣವಾಗಿ ಕಲಿತಿಲ್ಲ. ಇನ್ನೂ ಕಲಿಯುತ್ತಿದ್ದೇನೆ ಎಂದಿದ್ದಾರೆ. ಸದ್ಯ ಪಾತ್ರದ ಬಗ್ಗೆ ಅವರು ಹೆಚ್ಚು ಮಾಹಿತಿ ಬಿಟ್ಟು ಕೊಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Sapthami Gowda 3

ತಮ್ಮ ಪಾತ್ರಕ್ಕಾಗಿ ಹೊಸದನ್ನ ಕಲಿಯಲು ಸಪ್ತಮಿ ಸದಾ ಮುಂದಿರುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಎಂದರೆ, ‘ಕಾಂತಾರ’ ಸಿನಿಮಾ ಮಾಡುವ ತನಕ ಅವರು ಮೂಗು ಚುಚ್ಚಿಸಿಕೊಂಡಿರಲಿಲ್ಲ. ಆ ನಂತರ ಲೀಲಾ ಪಾತ್ರಕ್ಕಾಗಿ ಎರಡು ಕಡೆ ಮೂಗು ಚುಚ್ಚಿಸಿದ್ದರು. ಇದನ್ನೂ ಓದಿ:‘ಒಂದು ಮದುವೆ ಕಥೆ’ ಸಿನಿಮಾಗೆ ಮುಹೂರ್ತ

sapthami gowda 4

ಇದೀಗ ನಿತಿನ್ ಜೊತೆಗಿನ ಸಿನಿಮಾಗಾಗಿ ಕುದುರೆ ಸವಾರಿ ಕಲಿಯಲು ಮುಂದಾಗಿದ್ದಾರೆ. ಅದಷ್ಟೇ ಅಲ್ಲ, ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ. ಮತ್ತಷ್ಟು ಫಿಟ್ ಆಗಿದ್ದಾರೆ. ಹೊಸ ಪಾತ್ರಕ್ಕೆ ನ್ಯಾಯ ವದಗಿಸಲು ಹೊಸ ವಿಚಾರಗಳನ್ನು ಕಲಿತು ಮಾಡುತ್ತಿದ್ದಾರೆ. ಸದ್ಯ ಅವರ ಸಿನಿಮಾಗಳ ಆಯ್ಕೆ ಮತ್ತು ಶ್ರಮಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ (Sreeleela), ರುಕ್ಮಿಣಿ ವಸಂತ್ ತೆಲುಗಿನಲ್ಲಿ ಗುರುತಿಸಿಕೊಳ್ತಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಸಪ್ತಮಿ ಗೌಡ ಕೂಡ ಹೆಜ್ಜೆ ಇಡುತ್ತಿದ್ದಾರೆ. ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.

Share This Article