IPL 2024: ಮಕ್ಕಳ ಶಾಲಾ ಶುಲ್ಕಕ್ಕೆ ಕೂಡಿಟ್ಟ ಹಣದಲ್ಲೇ ಟಿಕೆಟ್‌ ಖರೀದಿಸಿದ ಧೋನಿ ಅಭಿಮಾನಿ!

Public TV
3 Min Read
MS Dhoni 1

– ಫೀಸ್‌ ಕಟ್ಟಿಕೊಂಡರಾಯ್ತು ಅಂತಾ ಮಕ್ಕಳಿಗೂ ಮಹಿ ಆಟ ತೋರಿಸಿದ ತಂದೆ

ಚೆನ್ನೈ: ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ (MS Dhoni) ಹೆಸರನ್ನೇ ಹೇಳುತ್ತಾರೆ. 42 ವರ್ಷದ ಮಹಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿದ್ದಾರೆ. 2013ರಿಂದ 2 ವರ್ಷಗಳ ತಂಡವನ್ನು ಅಮಾನತುಗೊಳಿಸಿದ್ದು, ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಚೆನ್ನೈ ತಂಡದ ಪರವಾಗಿಯೇ ಆಡಿದ್ದಾರೆ.

ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿರುವ ಮಹಿ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. 2024ರ (IPL 2024) ಟೂರ್ನಿ ಬಳಿಕ ಐಪಿಎಲ್‌ಗೂ ವಿದಾಯ ಹೇಳಲಿದ್ದಾರೆ ಎಂದ ಮಾತುಗಳು ದಟ್ಟವಾಗಿ ಹೇಳಿಬರುತ್ತಿವೆ. ಆದ್ದರಿಂದ ಅಭಿಮಾನಿಗಳು ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ದಾಖಲೆಯ ಮಟ್ಟದಲ್ಲಿ ಆಗಮಿಸುತ್ತಿದ್ದಾರೆ. ಪ್ರತಿ ಪಂದ್ಯದ ವೇಳೆಯೂ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ಧೋನಿಯ ಆಟ ನೋಡೋದಕ್ಕಾಗಿ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಇಟ್ಟಿದ್ದ 64 ಸಾವಿರ ರೂ.ನಲ್ಲೇ ಟಿಕೆಟ್‌ ಖರೀದಿಸಿದ್ದಾನೆ. ಮಕ್ಕಳೊಂದಿಗೆ ಮ್ಯಾಚ್‌ ಸಹ ವೀಕ್ಷಣೆ ಮಾಡಿದ್ದಾನೆ. ಈ ವಿಚಾರವನ್ನು ಅಭಿಮಾನಿ ಹೆಮ್ಮೆಯಿಂದಲೇ ಹೇಳಿಕೊಂಡಿದ್ದು, ಈ ಕುರಿತ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ವೀಡಿಯೋ ಒಂದರಲ್ಲಿ ಮಾತನಾಡಿರುವ ಧೋನಿ ಅಭಿಮಾನಿ, ನನಗೆ ಚೆನ್ನೈ ಪಂದ್ಯದ ಟಿಕೆಟ್ ಸಿಗಲಿಲ್ಲ, ಆದ್ದರಿಂದ ನಾನು ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸಿದೆ. ಈ ಟಿಕೆಟ್‌ನ ಒಟ್ಟು ಬೆಲೆ 64 ಸಾವಿರ ರೂ. ಆಯ್ತು. ಈ ಹಣವನ್ನು ನಾನು ನನ್ನ ಹೆಣ್ಣು ಮಕ್ಕಳ ಶಾಲಾ ಶುಲ್ಕ ಕಟ್ಟಲು ಕೂಡಿಟ್ಟಿದ್ದೆ. ಆಮೇಲೆ ಫೀಸ್‌ ಕಟ್ಟಿಕೊಂಡ್ರೆ ಆಯ್ತು ಅಂತಾ ಐಪಿಎಲ್‌ ನೋಡಲು ಕರೆದುಕೊಂಡು ಬಂದೆ. ಧೋನಿ ಆಟ ನೋಡಿ ನಮಗೆಲ್ಲರಿಗೂ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: IPL 2024: ಬಿದ್ದು ಎದ್ದು ಗೆದ್ದ ಪಂತ್‌ – ಐಪಿಎಲ್‌ನಲ್ಲಿ ರಿಷಭ್‌ ವಿಶೇಷ ಸಾಧನೆ

ಅಲ್ಲದೇ ಇತ್ತೀಚೆಗೆ ಕೆಕೆಆರ್‌ ವಿರುದ್ಧ ನಡೆದ ಪಂದ್ಯಕ್ಕೆ ತಮ್ಮ ಮೂವರು ಮಕ್ಕಳನ್ನು ಸಹ ಕರೆದುಕೊಂಡು ಹೋಗಿದ್ದಾನೆ ಅಭಿಮಾನಿ. ಈತನ ಅಭಿಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದರೂ ಸಹ ಬಹುತೇಕ ಮಂದಿ ಟೀಕಿಸಿದ್ದಾರೆ. ಪಂದ್ಯಗಳಿಗಿಂತ ಮಕ್ಕಳ ಭವಿಷ್ಯ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಫಿಫ್ಟಿ ಬಳಿಕ ಕೊಹ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಾಗ್ಬೇಕಿತ್ತು – ಮ್ಯಾಕ್ಸಿ ತರ ಆದ್ರೆ ಏನ್‌ ಮಾಡೋಕಾಗುತ್ತೆ: ಸೆಹ್ವಾಗ್‌

ಇತ್ತೀಚೆಗೆ ಸಿಎಸ್‌ಕೆ ತವರು ಕ್ರೀಡಾಂಗಣದಲ್ಲಿ ಕೆಕೆಆರ್‌ ವಿರುದ್ಧ ನಡೆದ ಪಂದ್ಯದ ವೇಳೆ ಧೋನಿ ಬ್ಯಾಟಿಂಗ್​ಗೆ ಬರುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಜೋರಾಗಿ ಧೋನಿಯ ಹೆಸರನ್ನು ಕೂಗಿದ್ದರು. ಈ ಗದ್ದಲಕ್ಕೆ ಎದುರಾಳಿ ತಂಡದ ಆಟಗಾರ ಆ್ಯಂಡ್ರೆ ರಸೆಲ್​ ತಮ್ಮ ಕಿವಿ ಮುಚ್ಚಿಕೊಂಡಿದ್ದರು. ಪಂದ್ಯದ ಬಳಿಕ ವಿಶ್ವದಲ್ಲೇ ಅಭಿಮಾನಿಗಳಿಗೆ ಪ್ರೀತಿಪಾತ್ರರಾದ ಕ್ರಿಕೆಟಿಗ ಧೋನಿ ಎಂದು ಹಾಡಿ ಹೊಗಳಿದ್ದರು.

ಇನ್ನೂ ಪಂದ್ಯದ ಬಳಿಕ ನಿವೃತ್ತಿ ಬಳಿಕ ಏನು ಮಾಡ್ತೀರಿ? ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ, ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಎಂದು ಎಂ.ಎಸ್‌.ಡಿ ಹೇಳಿದ್ದರು. ಇದನ್ನೂ ಓದಿ: 17ನೇ ಆವೃತ್ತಿ ಐಪಿಎಲ್‌ನ ಚೊಚ್ಚಲ ಶತಕ – ರನ್‌ ಮಿಷಿನ್‌ ಕೊಹ್ಲಿಯ ಹೊಸ ಮೈಲುಗಲ್ಲು!

Share This Article