ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ‘ಪುಷ್ಪ 2’ (Pushpa 2) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಪುಷ್ಪ 2 ಟೀಸರ್ ನೋಡಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಹಾಡಿ ಹೊಗಳಿದ್ದಾರೆ.
‘ಪುಷ್ಪ 2’ ಟೀಸರ್‌ನಲ್ಲಿ ಮಾಸ್ & ಕ್ಲಾಸ್ ಆಗಿ ಅಲ್ಲು ಅರ್ಜುನ್ (Allu Arjun) ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ನಟಿ ಆಲಿಯಾ ಭಟ್ (Alia Bhatt) ಅವರು ಅಲ್ಲು ಅರ್ಜುನ್‌ಗೆ ವಿಶೇಷವಾಗಿ ಶುಭಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಲ್ಲು ಅರ್ಜುನ್. ವಾಟ್ ಎ ಔಟ್‌ಸ್ಟ್ಯಾಂಡಿಂಗ್ ಟೀಸರ್ ಎಂದು ಹಾಡಿಹೊಗಳಿದ್ದಾರೆ. ಟೀಸರ್ ಅದ್ಭುತವಾಗಿದೆ ಎಂದು ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಲಿಯಾ ಮೆಚ್ಚುಗೆಗೆ ಅಲ್ಲು ಅರ್ಜುನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಧನ್ಯವಾದಗಳು. ಟೀಸರ್ ಬೆಂಕಿಯಂತೆ ಬಂದಿದೆ ಎಂದು ವ್ಯಕ್ತಪಡಿಸಿದಕ್ಕೆ ಖುಷಿಯಾಯಿತು ಎಂದು ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಜೈಲಿಂದ ರಿಲೀಸ್ ಆದ ಬಳಿಕ ಜ್ಯೂಸ್ ಕುಡಿದು ಸೋನು ಕೂಲ್.. ಕೂಲ್..


‘ಪುಷ್ಪ 2’ ಸಿನಿಮಾವನ್ನು ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ, ಭೋಜಪುರಿ ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿದೆ. ಈ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ.



