ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ಹಲವು ಸಿನಿಮಾಗಳಲ್ಲಿ ಡ್ಯೂಪ್ ಬಳಸದೇ ಹಲವು ಸ್ಟಂಟ್‌ಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಕಳೆದ ಸಿನಿಮಾ ಶೂಟಿಂಗ್‌ವೊಂದರಲ್ಲಿ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ವೇಳೆ ಕಾರು ಅಪಘಾತವಾಗಿತ್ತು. ಆ ವಿಡಿಯೋ ಇದೀಗ ಲಭ್ಯವಾಗಿದೆ. ಇದನ್ನೂ ಓದಿ:ಮತ್ತೆ ಬನ್ಸಾಲಿ ಅಡ್ಡಾಗೆ ಎಂಟ್ರಿ ಕೊಟ್ಟ ಆಲಿಯಾ ಭಟ್
ಅಜಿತ್ ಕುಮಾರ್ ಶೂಟಿಂಗ್ ವೇಳೆ ಹೇಗೆ ಆಕ್ಸಿಡೆಂಟ್ ಆಯ್ತು ಎಂಬುದನ್ನು ವಿಡಿಯೋ ಮೂಲಕ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ರಿವೀಲ್ ಮಾಡಿದ್ದಾರೆ. ಅಜಿತ್ ಸಾಹಸಮಯ ದೃಶ್ಯಗಳನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ನಟನ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:‘ಜಾಜಿ’ ಆಲ್ಬಂ ಸಾಂಗ್ ರಿಲೀಸ್ ಮಾಡಿದ ದರ್ಶನ್
Vidaamuyarchi filming
November 2023.#VidaaMuyarchi pic.twitter.com/M210ikLI5e
— Suresh Chandra (@SureshChandraa) April 4, 2024
ಅಜಿತ್ ಮತ್ತು ಸಹನಟ ಆರವ್ ಅವರು ಕಾರ್ ಚೇಸ್ ದೃಶ್ಯಕ್ಕಾಗಿ ‘ವಿದಾಮುಯಾರ್ಚಿ’ (Vidaamuyarchi) ಶೂಟಿಂಗ್ ಮಾಡುವಾಗ ಈ ಅವಘಡ ನಡೆದಿದೆ. ಅಜಿತ್ ಓಡಿಸುತ್ತಿದ್ದ ಕಾರು ಸ್ಕಿಡ್ ಆಗಿದ್ದು, ಭಾರೀ ದುರಂತವನ್ನು ಸಾಧ್ಯವಾದಷ್ಟು ಅವರು ತಪ್ಪಿಸಿದ್ದಾರೆ. ಈ ವೇಳೆ, ಅವಘಡದಿಂದ ಇಬ್ಬರೂ ಪಾರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಅಂದಹಾಗೆ, ‘ವಿದಾಮುಯಾರ್ಚಿ’ ಚಿತ್ರದಲ್ಲಿ ಅಜಿತ್ ಕುಮಾರ್, ತ್ರಿಷಾ, ರೆಜಿನಾ, ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ ಚಿತ್ರತಂಡ.