ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿ, ಸರ್ಜಿಕಲ್ ಸ್ಟ್ರೈಕ್ ನಾಟಕ: ಎಸ್.ಆರ್ ಶ್ರೀನಿವಾಸ್

Public TV
1 Min Read
SR Srinivas

ತುಮಕೂರು: ಪುಲ್ವಾಮಾ ದಾಳಿಯನ್ನು (Pulwama attack) ಬೇರೆ ಯಾರೂ ಮಾಡಿಲ್ಲ, ಬಿಜೆಪಿಯವರೇ (BJP) ಮಾಡಿಸಿದ್ದು. ಬಳಿಕ ಇವರೇ ಸರ್ಜಿಕಲ್ ಸ್ಟ್ರೈಕ್ ನಾಟಕ ಮಾಡಿದ್ದಾರೆ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ (S.R Srinivas) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ (Congress) ರೋಡ್ ಶೋ ವೇಳೆ ಮಾತನಾಡಿದ ಅವರು, ಕಳೆದ ಬಾರಿ ಪುಲ್ವಾಮಾ ದಾಳಿ ಮಾಡಿ ಚುನಾವಣೆಯಲ್ಲಿ ಗೆದ್ದರು. ಈ ಬಾರಿ ರಾಮ ಮಂದಿರ ತೋರಿಸುತ್ತಿದ್ದಾರೆ. ಬರೀ ಹಿಂದೂ ಮುಸ್ಲಿಂ ಗಲಾಟೆ ಮಾಡೋದೆ ಇವರ ಕೆಲಸ. ಮೋದಿ ಬಂದು 10 ವರ್ಷ ಆಯ್ತು, ಒಬ್ಬ ಮುಸ್ಲಿಂ ವ್ಯಕ್ತಿಯನ್ನು ದೇಶದಿಂದ ಓಡಿಸಲು ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಡಾ.ಮಂಜುನಾಥ್ – ಡಿಕೆಸು ನೋಡಿ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು

ತುಮಕೂರಿನ ಜನ ಸ್ವಾಭಿಮಾನ ಮಾರಾಟ ಮಾಡಿದ ಪ್ರಕರಣ ಇಲ್ಲ. ಈ ಬಾರಿಯೂ ಯಾರೂ ಸ್ವಾಭಿಮಾನ ಮಾರಿಕೊಳ್ಳಲ್ಲ ಎಂಬ ಭರವಸೆ ಇದೆ. ಬಿಜೆಪಿ ಸಂಸದರು ಯಾರೂ ಒಬ್ಬ ಮೋದಿ ಮುಂದೆ ಗಂಡಸಾಗಿ ನಿಂತಿಲ್ಲ. ಲೋಕಸಭೆಯಲ್ಲಿ ಸಮರ್ಥವಾಗಿ ಎದುರಿಸುವ ಮುದ್ದುಹನುಮೇಗೌಡರಿಗೆ ಮತ ಹಾಕಬೇಕು ಎಂದಿದ್ದಾರೆ.

ಇದೇ ವೇಳೆ, ಟಿಕೆಟ್ ಸಿಗುವ ಮುನ್ನ ಮುದ್ದುಹನುಮೇಗೌಡ (Mudda Hanumegowda) ಸುಟ್ಟ ಬದನೆಕಾಯಿ ಥರ ಇದ್ದರು. ಈಗ ಪರವಾಗಿಲ್ಲ ಸ್ವಲ್ಪ ನೆಟ್ಟಗಾಗಿದ್ದಾರೆ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಇದನ್ನೂ ಓದಿ: ರೈತರಿಗೆ ಮಿಡಿಯುವ ಹೃದಯ ಕುಮಾರಸ್ವಾಮಿಯವ್ರದ್ದು: ನಿಖಿಲ್

Share This Article